ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾನಾ ಭಾಗಗಳಿಗೆ ತನಿಖಾ ತಂಡ; ಕೈಸೇರಿದ ಸಂತೋಷ್ PM ವರದಿ

ಪಬ್ಲಿಕ್ ನೆಕ್ಸ್ಟ್ ಫಾಲೊಅಪ್

ಉಡುಪಿ: ಈಶ್ವರಪ್ಪ ರಾಜಿನಾಮೆಗೆ ಕಾರಣವಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕಗೊಂಡಿದೆ. ಪ್ರಕರಣದ ತನಿಖೆಗೆ ಏಳು ತಂಡ ರಚಿಸಲಾಗಿದ್ದು, ಬ್ರಹ್ಮಾವರ, ಮಲ್ಪೆ, ಕುಂದಾಪುರ, ಮಣಿಪಾಲ ವೃತ್ತ ನಿರೀಕ್ಷಕರ ಮುಂದಾಳತ್ವದ 4, ತನಿಖಾಧಿಕಾರಿ ಪ್ರಮೋದ್ ನೇತೃತ್ವದ 1, ಕೋಟ ಎಸ್‌ಐ ಮಧು ನೇತೃತ್ವದ 1 ಮತ್ತು ನಗರ ಠಾಣೆ ಎಸ್‌ಐ ಮಹೇಶ್ ನೇತೃತ್ವದ 1 ತಂಡ ಹೀಗೆ ಒಟ್ಟು 7 ತಂಡಗಳು ಉಡುಪಿ ಸಹಿತ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ತನಿಖೆ ನಡೆಸುತ್ತಿವೆ. ಪಾಟೀಲ್ ತಂದಿದ್ದ ಎರಡು ಬ್ಯಾಗ್‌ಗಳನ್ನು ಮನೆಯವರು ಬಿಟ್ಟು ಹೋಗಿದ್ದಾರೆ.

ತಮಗೆ ಬೇಕಾದ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ಕೇವಲ ಬಟ್ಟೆಗಳನ್ನು ಲಾಡ್ಜ್‌ನಲ್ಲಿಯೇ ಬಿಟ್ಟಿದ್ದಾರೆ. ತನಿಖಾ ತಂಡಗಳು ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿವೆ. ಪಾಟೀಲ್‌ನ ಬ್ಯಾಂಕ್ ಖಾತೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಈ ಮಧ್ಯೆ ಇವತ್ತು ಸಂತೋಷ್ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದೆ. ಸಂತೋಷ್ ಪಾಟೀಲ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎನ್ನುವುದಕ್ಕೆ ಪುರಾವೆ ಸಿಕ್ಕಿದೆ. ಸಂತೋಪ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಶಾಂಭವಿ ಲಾಡ್ಜ್‌ 207 ರೂಮ್‌ನಲ್ಲಿ ಎರಡು ಪೇಪರ್ ಗ್ಲಾಸ್‌, ಹಾಗೂ ಸ್ಟ್ರಾ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಹೀಗಾಗಿ ಸಂತೋಷ್ ತಾನೇ ಆತ್ಮಹತ್ಯೆ ಮಾಡಿಕೊಂಡದ್ದು ದೃಡವಾದಂತಿದೆ.ಆದರೆ ಸಾವಿಗೆ ಕಾರಣ( cause of death) ವರದಿಯಲ್ಲಿ ನಮೂದಾಗಿಲ್ಲ.

ಇನ್ನು ರಕ್ತ, ಶ್ವಾಸಕೋಶ, ಕಿಡ್ನಿ, ಚರ್ಮದ ಪರೀಕ್ಷೆ ವರದಿ ಬಾಕಿ ಇದ್ದು, ದೇಹದ ಒಳಾಂಗಗಳ ಪರೀಕ್ಷಾ ವರದಿ ಬಂದ ಮೇಲೆ ಅಂತಿಮ ಮರಣೋತ್ತರ ಪರೀಕ್ಷೆ ಸಿಗಲಿದೆ.. ನಂತರ ಮರಣೋತ್ತರ ಪರೀಕ್ಷೆ ಮತ್ತು ಆರ್ ಎಫ್ ಎಸ್ ಎಲ್ ಜೊತೆ ವೈದ್ಯರು ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ಪೊಲೀಸರು ಎಫ್ ಎಸ್ ಎಲ್ ವರದಿಗಾಗಿ ಕಾಯುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

20/04/2022 05:25 pm

Cinque Terre

2.86 K

Cinque Terre

0

ಸಂಬಂಧಿತ ಸುದ್ದಿ