ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಹೆತ್ತವರಿಗೆ ಬೆದರಿಕೆ,ನಿಂದನೆ: ಮಗನ ವಿರುದ್ಧ ದೂರು ದಾಖಲು

ಬ್ರಹ್ಮಾವರ : ಮಗನೇ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ತಾಯಿಯ ಕರಿಮಣಿ ಸರವನ್ನು ತುಂಡರಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಬ್ರಹ್ಮಾವರದ ಹಂದಾಡಿಯ ಜಯರಾಮ ಶೆಟ್ಟಿ ಅವರು ತಮ್ಮ ಮಗ ರಜತ್ ಶೆಟ್ಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಜಯರಾಮ ಶೆಟ್ಟಿ ಹಾಗೂ ಅವರ ಪತ್ನಿ ಪೂರ್ಣಿಮಾ ಶೆಟ್ಟಿ ಅವರು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದು, ಮಗನೊಂದಿಗೆ ಬ್ರಹ್ಮಾವರದ ಹಂದಾಡಿಯಲ್ಲಿ ವಾಸವಾಗಿದ್ದರು. ತಂದೆ ತಾಯಿ ಮಗನಿಗೆ ಕೆಲಸ ಹುಡುಕಿಕೊಳ್ಳುವಂತೆ ತಿಳಿ ಹೇಳಿದ್ದರೂ ಮಗ ಕೆಲಸ ಮಾಡದೇ ಮನೆಯಲ್ಲೇ ಇರುತ್ತಿದ್ದ.

ನಿನ್ನೆ ಸಂಜೆ ವೇಳೆ ಜಯರಾಮ ಶೆಟ್ಟಿ ಹಾಗೂ ಅವರ ಪತ್ನಿ ಪೂರ್ಣಿಮಾ ಶೆಟ್ಟಿ ಅವರು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಮಗ ರಜತ್ ಶೆಟ್ಟಿ ಏಕಾಏಕಿ ಇಬ್ಬರಿಗೂ ಅವಾಚ್ಯವಾಗಿ ಬೈದು, ತಾಯಿಯ ಕರಿಮಣಿ ತಾಳಿಯನ್ನು ಹಿಡಿದೆಳೆದು ತುಂಡು ಮಾಡಿ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲದೆ ತಂದೆ ತಡೆಯಲು ಬಂದಾಗ ಕತ್ತಿ ಹಿಡಿದು ಇಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

09/04/2022 09:40 pm

Cinque Terre

2.69 K

Cinque Terre

0

ಸಂಬಂಧಿತ ಸುದ್ದಿ