ಹಿರಿಯಡ್ಕ: ಜಿಲ್ಲೆಯ ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ಅಂಗಡಿ ಮಾಲೀಕರ ಬೈಕ್ ನ್ನು ಕಳ್ಳತನ ನಡೆಸಿ ಪರಾರಿಯಾದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಎರಡು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಶಿವಮೊಗ್ಗದ ವಿಳಾಸ ಕುಮಾರ ಎಂದು ತಿಳಿದು ಬಂದಿದೆ.
ಪ್ರಕರಣ ವಿವರ: ದಿನಾಂಕ: 03/04/2022 ರಂದು ಸಂಜೆ 4:30 ಗಂಟೆಗೆ ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್ ನ ಎದುರು ಅದರ ಮಾಲಕ ಪ್ರಸನ್ನ ಕುಮಾರ್ ತನ್ನ ಮೋಟಾರು ಸೈಕಲನ್ನು ನಿಲ್ಲಿಸಿ ಇಟ್ಟು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವಾಗ, ಮೋಟಾರು ಸೈಕಲನ್ನು ಒರ್ವ ವ್ಯಕ್ತಿ ಕಳವು ಮಾಡಿ ಹಿರಿಯಡ್ಕ ಕಡೆಗೆ ಹೋಗಿದ್ದು, ಈ ಬಗ್ಗೆ ಹಿರಿಯಡ್ಕ ಠಾಣೆಗೆ ಪ್ರಸನ್ನ ಕುಮಾರ್ ದೂರು ನೀಡಿದ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಹಿರಿಯಡ್ಕ ಪೊಲೀಸರು ಅಂಜಾರು ಗ್ರಾಮದ ಓಂತಿಬೆಟ್ಟು ಎಂಬಲ್ಲಿ ನಾಕಾಬಂಧಿ ನಿರ್ಮಿಸಿ ವಾಹನ ತಪಾಸಣೆ ನಡೆಸುತ್ತಿರುವಾಗ ಸಂಜೆ 17:50 ಗಂಟೆಯ ವೇಳೆಗೆ ಒರ್ವ ಮೋಟಾರ್ ಸೈಕಲ್ ಸವಾರ ಆತ್ರಾಡಿ ಕಡೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ್ದ. ಆ ಮೋಟಾರ್ ಸೈಕಲ್ ನಂಬರ್ ಆತ್ರಾಡಿಯಲ್ಲಿ ಕಳುವಾದ KA-20-S-4217 ಮೋಟಾರ್ ಸೈಕಲ್ ಆಗಿತ್ತು. ಕೂಡಲೇ ಪೊಲೀಸರು ಮೋಟಾರ್ ಸೈಕಲ್ ನಿಲ್ಲಿಸುವಂತೆ ಸೂಚನೆ ನೀಡಿದರೂ ಪರಾರಿಯಾಗಲು ಪ್ರಯತ್ನಿಸಿದಾಗ ಮೋಟಾರ್ ಸೈಕಲ್‌ನ್ನು ಪೊಲೀಸರು ಅಡ್ಡಗಟ್ಟಿ ಆತನನ್ನು ವಿಚಾರಿಸಿದಾಗ ಆತ್ರಾಡಿ ಅಂಗಡಿಯ ಎದುರು ನಿಲ್ಲಿಸಿರುವುದನ್ನು ಕಳುವು ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
Kshetra Samachara
04/04/2022 08:02 pm