ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಹುಸಿ ಕರೆ: ದೂರು ದಾಖಲು

ಕಾರ್ಕಳ: ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಮಹಿಳೆ ಯೊಬ್ಬರು ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಹುಸಿ ಕರೆ ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮಯ್ಯ ಎಂಬವರ ಮೊಬೈಲ್‌ಗೆ ಮಾ.30ರಂದು ಮಹಿಳೆಯೊಬ್ಬರು ಕರೆ ಮಾಡಿ, ತಾನು ಪಿ.ಯು. ಮಂಡಳಿಯ ಪರೀಕ್ಷಾ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಮಾ.31ರಂದು ನಡೆಯುವ ಬಯೋಲಜಿ ಪ್ರಶ್ನೆ ಪತ್ರಿಕೆ ಬಯಲಾಗಿದ್ದು, ಉಳಿದ ಇಂಗ್ಲೀಷ್, ವಿಜ್ಞಾನ ವಿಭಾಗದ ಪ್ರಶ್ನೆ ಪತ್ರಿಕೆ ಕೂಡಾ ಬಯಲಾಗಿದೆ. ನಿಮ್ಮಲ್ಲಿ ಇರಿಸಲಾದ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲನೆ ಮಾಡುವ ಬಗ್ಗೆ ನನ್ನ ವಾಟ್ಸಾಪ್‌ಗೆ ಕಳುಹಿಸಿ ಎಂದು ತಿಳಿಸಿದ್ದರು.

ಕರೆ ಮಾಡಿದ ವ್ಯಕ್ತಿಯ ಹೆಸರು ವಿಚಾರಿಸುವಾಗ ಆಕೆ, ತನ್ನ ಹೆಸರನ್ನು ಹೇಳದೆ ಫೋನ್ ಕರೆಯನ್ನು ಕಟ್ ಮಾಡಿದ್ದರೆಂದು ದೂರಲಾಗಿದೆ. ಯಾರೋ ಮಹಿಳೆ ಪಿ.ಯು. ಮಂಡಳಿಯವರು ಎಂದು ಸುಳ್ಳು ಹೇಳಿ ಹುಸಿ ಕರೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

02/04/2022 05:09 pm

Cinque Terre

3.26 K

Cinque Terre

0

ಸಂಬಂಧಿತ ಸುದ್ದಿ