ಕಾಪು: ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ನಗದು ದೋಚಿ ಪರಾರಿಯಾದ ಘಟನೆ ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರ ಎಂಬಲ್ಲಿ ನಡೆದಿದೆ.
ಇಲ್ಲಿನ ಮಸೀದಿಯ ಹಿಂಬದಿಯ ರೆಹಮತ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕೋಣೆಯಲ್ಲಿದ್ದ ಕಪಾಟನ್ನು ಜಾಲಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಈ ಮನೆಗೆ ಇನ್ನೂರು ಮೀಟರ್ ದೂರದಲ್ಲಿರುವ ಹಮೀದ್ ಮೂಸ ಎಂಬವರ ಮನೆಗೆ ನುಗ್ಗಿ ಹಣ ಕಳ್ಳತನ ಮಾಡಿದ್ದಾರೆ. ಎರಡೂ ಮನೆಯ ಬಾಗಿಲು ಮತ್ತು ಕಿಟಕಿಗೆ ಹಾನಿಗೊಳಿಸದೆ ಗೋಡೆಯಲ್ಲಿರುವ ಗಾಳಿ ಕಿಂಡಿಯ ಮೂಲಕ ಕಳ್ಳರು ಒಳ ಪ್ರವೇಶಿಸಿರಬಹುದೆಂದು ಸ್ಥಳೀಯರು ಸಂಶಯಿಸಿದ್ದಾರೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ನೇತೃತ್ವದ ಪೊಲೀಸರ ತಂಡ ಭೇಟಿ ಮಾಹಿತಿ ಕಲೆ ಹಾಕಿದ್ದು, ಕಳ್ಳರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.
Kshetra Samachara
13/02/2021 02:27 pm