ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಮಾಳ ಕಾಡಿನಲ್ಲಿ ಬಂಟ್ವಾಳದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾರ್ಕಳ: ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಳದ ಕಟ್ಟೆಬೈಲು ಎಂಬಲ್ಲಿ ಸಂತೋಷ ನಾಯಕ್ ಅವರ ಮನೆ ಸಮೀಪದ ಅರಣ್ಯ ಪ್ರದೇಶದಲ್ಲಿ ಸುಮಾರು 60ರ ಹರೆಯದ ಓರ್ವ ಗಂಡಸಿನ ಮೃತ ಶರೀರ ಮರದ ಮೇಲೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾಪತ್ತೆಯಾಗಿರುವ ವ್ಯಕ್ತಿ ಕೊಳೆತ ಶವವಾಗಿ ಪತ್ತೆ!

ನಾಪತ್ತೆಯಾಗಿರುವ ವ್ಯಕ್ತಿ ಕೊನೆಗೂ ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿ ಧರಿಸಿದ ಬಟ್ಟೆಯಲ್ಲಿ ಬಂಟ್ವಾಳದ ಸ್ಥಳೀಯ ಟೈಲರ್ ಅಂಗಡಿಯ ಹೆಸರು ಸಿಕ್ಕಿದ್ದು, ತಕ್ಷಣ ಗ್ರಾಮಾಂತರ ಪೊಲೀಸರು ಬಂಟ್ವಾಳ ಠಾಣೆಗೆ ಕರೆ ಮಾಡಿ ವಿಚಾರಿಸಿದಾಗ ನಾಲ್ಕು ದಿನದ ಹಿಂದೆ ಸಿದ್ದಕಟ್ಟೆ ಮಂಚಕಲ್ಲು ನಿವಾಸಿ ಕೊರಗಪ್ಪ ಪೂಜಾರಿ ಎಂಬವರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಇದೇ ಆಧಾರದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯ ಮನೆಯವರನ್ನು ಪೊಲೀಸರು ಸಂಪರ್ಕಿಸಿ‌ ನಾಪತ್ತೆಯಾಗಿರುವ ವ್ಯಕ್ತಿಗೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೂ ಹೋಲಿಕೆ ಬಂದಿರುವುದರಿಂದ ಮನೆಯವರನ್ನು ಕರೆಸಿ ಶವದ ಗುರುತು ಹಚ್ಚುವಂತೆ ತಿಳಿಸಿದ್ದಾರೆ. ಇದೇ ವೇಳೆ ಮನೆಯವರು ಸ್ಥಳಕ್ಕೆ ಆಗಮಿಸಿ ಶವದ ಗುರುತು ಪತ್ತೆ ಮಾಡಿದ್ದಾರೆ. ಪ್ರಕರಣ ಕೆಲವೇ ಗಂಟೆಗಳಲ್ಲಿ ಅಂತ್ಯಗೊಳಿಸಿದ ನೂತನ ಪಿಎಸ್ ಐ ತೇಜಸ್ವಿ ಅವರ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

12/01/2021 10:41 pm

Cinque Terre

6.65 K

Cinque Terre

0

ಸಂಬಂಧಿತ ಸುದ್ದಿ