ಉಡುಪಿ: ಮುಂಬೈ ಮೂಲದ ಯುವಕನೊಬ್ಬ ಉಡುಪಿಯ ತನ್ನ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಇಂದು ನಡೆದಿದೆ.
ನೀಲ್ ಡಿ ಕ್ರೂಜ್ (18) ಆತ್ಮಹತ್ಯೆಗೆ ಶರಣಾದ ಯುವಕ. ನೀಲ್ ಮುಂಬೈನ ಪ್ರಸಿದ್ಧ ಕಲಾ ಕಾಲೇಜಿನಿಂದ ಬಿ.ಎ. ವ್ಯಾಸಾಂಗ ಮಾಡುತ್ತಿದ್ದ. ಮುಂಬೈನ ಬೊರಿವಾಲಿಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಲ್ಲಿ ದಾದಿಯಾಗಿದ್ದ ಜಸಿಂತಾ ಡಿ ಕ್ರೂಜ್ ಅವರ ಏಕೈಕ ಪುತ್ರ ಎಂಬ ಮಾಹಿತಿ ಲಭಿಸಿದೆ.
ನೀಲ್ ದೀರ್ಘಕಾಲದವರೆಗೆ ಖಿನ್ನತೆಗೆ ಒಳಗಾಗಿದ್ದ. ಈ ಹಿಂದೆ ಮುಂಬೈಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯಕೀಯ ಚಿಕಿತ್ಸೆಯಲ್ಲಿದ್ದರು. ವಾತಾವರಣದ ಬದಲಾವಣೆಗಾಗಿ ವಿಹಾರಕ್ಕೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಹೀಗಾಗಿ ಜಸಿಂತಾ ಅವರು ಹುಡೆನಲ್ಲಿ ವಾಸಿಸುವ ಮಗನ ಸ್ನೇಹಿತ ವಾಲ್ಟರ್ ಅವರೊಂದಿಗೆ ಕೆಮ್ಮನುಗೆ ಕಳುಹಿಸಿದ್ದರು. ಆದರೆ ನೀಲ್ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿದ್ದ ಜನರು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಗನ ಸಾವಿನ ಸುದ್ದಿ ಕೇಳಿದ ಜಸಿಂತಾ ಶುಕ್ರವಾರ ಮುಂಬೈನಿಂದ ಉಡುಪಿಗೆ ಬಂದಿದ್ದಾರೆ. ಈ ಸಂಬಂಧ ಮಾಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/09/2020 07:20 pm