ಕುಂದಾಪುರ: ಭಟ್ಕಳದಿಂದ ಕುಂದಾಪುರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗೊಳ್ಳಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಮಂಗಳೂರು ಹರೇಕಳ ನಿವಾಸಿ ಮಹಮ್ಮದ್ ಸಾಕೀರ್(24), ಮಹಮ್ಮದ್ ಜಾಫರ್ (32),
ಬೈಂದೂರು ಕಿರಿಮಂಜೇಶ್ವರ ನಿವಾಸಿ ಅಲ್ಫಾಜ್ (20), ಹೊನ್ನಾವರ ನಿವಾಸಿ ಮಹಮ್ಮದ್ ಯುಸೂಫ್ ಸಾಫ್ (45) ಬಂಧಿತರು.
ಭಟ್ಕಳದಿಂದ ಕುಂದಾಪುರಕ್ಕೆ ಬರುವ ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಪಿಎಸ್ ಐ ಭೀಮಾ ಶಂಕರ್ ಅವರ ತಂಡ
ಮರವಂತೆ ರಾ.ಹೆ-66ರಲ್ಲಿ ಇನ್ಸುಲೇಟರ್ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿತ್ತು.
ಅಂದಾಜು 14,45,000 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದಿರುವ
ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
19/09/2020 11:20 am