ಕುಂದಾಪುರ: ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮಾಸೆಬೈಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಗ್ರಾಮದ ಅತ್ತಿಕೊಡ್ಲು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಡಿಕೊಂಡಾತನನ್ನು ಸ್ಥಳೀಯ ನಿವಾಸಿ ಹೊಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನಯ ಶೆಟ್ಟಿ(33) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಅಮಾಸೆಬೈಲು ಪೊಲೀಸರು ಬಂದಾಗ ಶವ ಮೇಲೆತ್ತಲು ಸ್ಥಳೀಯರು ಯಾರೂ ಸಿದ್ಧರಿರಲಿಲ್ಲ. ಈ ಸಂದರ್ಭ ಪೊಲೀಸ್ ಸಿಬ್ಬಂದಿ ಪ್ರಕಾಶ್ ಎಂಬುವರೇ ಸ್ವತಃ ಬಾವಿಗಿಳಿದು ಶವ ಮೇಲೆತ್ತುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭ ಪಿಎಸೈ ಸುಬ್ಬಣ್ಣ, ಎಎಸೈ ಉಮೇಶ್ ನಾಯ್ಕ್, ಹೆಡ್ ಕಾನ್ಸ್ಟೇಬಲ್ ಕೃಷ್ಣ, ಮಹಿಳಾ ಸಿಬ್ಬಂದಿ ಚೈತ್ರ ಪ್ರಕಾಶ್ ಗೆ ಸಹಕರಿಸಿದರು. ಇದೀಗ ಪ್ರಕಾಶ್ ಕಾರ್ಯ ವ್ಯಾಪಕ ಶ್ಲಾಘನೆಗೆ ಒಳಗಾಗಿದ್ದು, ಸ್ಥಳೀಯರು ಪ್ರಕಾಶ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆತ್ಮಹತ್ಯೆ ಪ್ರಕರಣ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
Kshetra Samachara
16/09/2022 01:20 pm