ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ಅವರು ರೌಂಡ್‌ನಲ್ಲಿದ್ದಾಗ ಗಾಂಜಾ ಸೇವನೆ ಬಗ್ಗೆ ಖಚಿತ ಮಾಹಿತಿ ಪಡೆದು ತ್ರಾಸಿ ಬೀಚ್ ಪಕ್ಕ ಗಾಂಜಾ ಸೇವಿಸುತ್ತಿದ್ದ ಮಂಜುನಾಥ, ವಿನೋದ, ಕಾರ್ತಿಕ್, ಮತ್ತು ಪುರುಷೋತ್ತಮ್ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಕಾರ್ತಿಕ್ ಮತ್ತು ಪುರುಷೋತ್ತಮ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/09/2022 11:40 pm