ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಅಪಾರ್ಟ್ಮೆಂಟ್ ಒಂದಕ್ಕೆ ದಾಳಿ ನಡೆಸಿ ಪೊಲೀಸರು ಮಾದಕ ದ್ರವ್ಯಗಳ ಇಬ್ಬರು ಮಾರಾಟಗಾರರನ್ನು ಬಂಧಿಸಿ, ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆದಿತ್ಯ ಪ್ರಭು ಮತ್ತು ಅನೀಶ್ ರಾಜನ್ ಬಂಧಿತರು. ಇವರಲ್ಲಿ ಒಬ್ಬ ವೈದ್ಯ ವಿದ್ಯಾರ್ಥಿಯಾಗಿದ್ದಾನೆ. ಬಂಧಿತರ ಬಳಿ 32 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ,9 ಗ್ರಾಂ ಬ್ರೌನ್ ಶುಗರ್ ಮತ್ತು 25 ಎಂಡಿಎಂಎ ಮಾತ್ರೆ ಸೇರಿ ಒಟ್ಟು 3,89,000 ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಕುಮಾರ್ ಚಂದ್ರ ಅವರು ತಮ್ಮ ತಂಡದವರಾದ ಡಿವೈಎಸ್ ಪಿ ಟಿ.ಆರ್. ಜೈ ಶಂಕರ್, ಎಎಸ್ಪಿ ಹರಿರಾಮ್ ಶಂಕರ್, ಮಣಿಪಾಲದ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಗೌಡ, ಪಿಎಸ್ಐ ರಾಜ್ ಶೇಖರ್,ಡ್ರಗ್ ಕಂಟ್ರೋಲರ್ ನಾಗರಾಜ್,ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ಮತ್ತು ಉಪೇಂದ್ರ ಕುಮಾರ್, ಮಣಿಪಾಲ ಠಾಣೆಯ ಸಿಬ್ಬಂದಿ ನವೀನ್ ಕುಮಾರ್, ಶಾಂತರಾಮ್,ಆಶೋಕ್ ಪಾಟಕರ್ ಪೊಲೀಸ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
02/11/2020 07:48 am