ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಸ್ಟರ್ ಕಾರಿನಲ್ಲಿ ಬಂದು ಖಾಸಗಿ ಬಸ್ ಮಾಲೀಕನ ಕೊಲೆಗೆ ಯತ್ನ

ಉಡುಪಿ: ಡಸ್ಟರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಖಾಸಗಿ ಬಸ್‌ ಮಾಲೀಕನ ಕೊಲೆಗೆ ಯತ್ನಿಸಿದ ಘಟನೆ ಮಣಿಪಾಲದಲ್ಲಿ ಬುಧವಾರ ನಡೆದಿದೆ.

ಮಣಿಪಾಲದ ಲಕ್ಷೀಂದ್ರ ನಗರದಲ್ಲಿರುವ ಎ.ಕೆ.ಎಂ.ಎಸ್ ಬಸ್ ಮಾಲೀಕನ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ತಲವಾರಿನೊಂದಿಗೆ ಬಂದಿದ್ದರು. ಅದೃಷ್ಟವಶಾತ್ ಈ ವೇಳೆ ಬಸ್ ಮಾಲೀಕ ಸೈಫುದ್ದೀನ್ ಕಚೇರಿಯಲ್ಲಿ ಇಲ್ಲದಿದ್ದರಿಂದ ಸಿಬ್ಬಂದಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಸೈಪುದ್ದೀನ್ ಈ ಹಿಂದೆ ಕೆಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಜಾಮೀನು ಪಡೆದು ಹೊರಗೆ ಬಂದಿದ್ದ. ಹೀಗಾಗಿ ಆತನ ಕೊಲೆಗೆ ಯತ್ನಿಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

04/11/2020 05:32 pm

Cinque Terre

6.92 K

Cinque Terre

0

ಸಂಬಂಧಿತ ಸುದ್ದಿ