ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಯಮ ಗಾಳಿಗೆ ತೂರಿದ ಟಿಪ್ಪರ್ ಚಾಲಕರು: ಮಣ್ಣು ಸಾಗಾಟ ಲಾರಿಗಳಿಂದ ಪರಿಸರ ಧೂಳುಮಯ, ಅನಾರೋಗ್ಯ ಭೀತಿ!

ಉಡುಪಿ: ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ನಗರ ವಲಯದ ಪ್ರಮುಖ ರಸ್ತೆಗಳಲ್ಲಿ ಮಣ್ಣು ಸಾಗಿಸುವ ಲಾರಿಗಳ ಆರ್ಭಟ ಜೋರಾಗಿದೆ.

ಕೆಂಪು ಮಣ್ಣಿಗೆ ಹೊದಿಕೆ- ಟರ್ಪಾಲ್ ಹಾಕದೆ ನಿತ್ಯ ಹತ್ತಾರು ಲಾರಿಗಳು ಓಡಾಡುತ್ತಿರುವುದರಿಂದ ಪಾದಚಾರಿಗಳು, ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಸಾರ್ವಜನಿಕರು, ಬೈಕು ಸವಾರರು, ಹಿರಿಯ ನಾಗರಿಕರು ಬೀಸುವ ಗಾಳಿಯಲ್ಲಿ ಹಾರಿ ಬರುವ ಮಣ್ಣಿನ ಕಣಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರು ಕಣ್ಣಿನ ಸಮಸ್ಯೆಗಳಿಗೆ ತುತ್ತಾಗ ಬೇಕಾಗಿರುವ ಪರಿಸ್ಥಿತಿ ಮಣ್ಣು ಸಾಗಾಟದ ಲಾರಿಗಳಿಂದ ಎದುರಾಗಿದೆ. ಅಲ್ಲದೆ, ಲಾರಿಯಿಂದ ಉರುಳಿ ರಸ್ತೆಯಲ್ಲಿ ಬೀಳುವ ಮಣ್ಣಿನಿಂದ ರಸ್ತೆಯ ಅಂದವೂ ಕೆಡುತ್ತಿದೆ.

ಮೊದಲೇ ಕರಾವಳಿಯ ಬಿಸಿಲಿನ ಧಗೆ. ಇದರ ಜೊತೆಗೆ ಧೂಳೂ ಬೆರೆತು ಇಡೀ ಪರಿಸರವೂ ಹದಗೆಡುತ್ತಿದೆ. ಮರಳು, ಮಣ್ಣು ಸಾಗಿಸುವ ಲಾರಿಗಳು ಕಡ್ಡಾಯವಾಗಿ ಟರ್ಪಾಲ್ ಅಥವಾ ಹೊದಿಕೆ ಹಾಕಲೇಬೇಕು ಎಂಬ ನಿಯಮ ಇದೆ.

ಆದರೆ, ಈ ಲಾರಿ ಚಾಲಕ-ಮಾಲಕರು ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ. ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಹಾರ ಒದಗಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/10/2020 02:17 pm

Cinque Terre

9.08 K

Cinque Terre

0

ಸಂಬಂಧಿತ ಸುದ್ದಿ