ಕಾಪು: ಕುಡಿತದ ಅಮಲಿನಲ್ಲಿ ವಿವಾಹಿತ ಮಹಿಳೆಯೊಬ್ಬರು ಬ್ಲೇಡಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟಕಲ್ಲಿನಲ್ಲಿ ನಡೆದಿದೆ.
ಬಂಟಕಲ್ಲಿನ ಅರಸಿಕಟ್ಟೆ ಪ್ರೇಮಾ(38) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ಬೆಳಗ್ಗೆಯೇ ಶರಾಬಿನ ಅಮಲಿನಲ್ಲಿ ಗಂಡನ ಜೊತೆ ಜಗಳವಾಡಿದ್ದರು. ಅದೇ ದಿನ ರಾತ್ರಿ ಮತ್ತೆ ಗಂಡನ ಜೊತೆ ಜಗಳ ನಡೆದಿತ್ತು. ಊಟ ಮಾಡಿ ಮಲಗುವಂತೆ ಪತಿಯು ಹೆಂಡತಿಗೆ ಹೇಳಿದ್ದಾರೆ. ತಕ್ಷಣವೇ ಕೋಣೆಯೊಳಗೆ ಹೋದ ಮಹಿಳೆ ಬ್ಲೇಡಿನಿಂದ ಕೈ ಕೊಯ್ದುಕೊಂಡಿದ್ದಾರೆ. ವಿಪರೀತ ರಕ್ತಸ್ರಾವವಾಗಿದ್ದ ಮಹಿಳೆಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Kshetra Samachara
27/10/2020 06:29 pm