ಕುಂದಾಪುರ: ಈ ತಿಂಗಳಿನಿಂದ ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಸುವ ವ್ಯವಸ್ಥೆ ಜಾರಿಗೆ ಬಂದಿದ್ದು ಇದರಿಂದ ತುಂಬಾ ಸಮಸ್ಯೆಗಳು ಉಂಟಾಗಿದೆ. ಸಾವಿರಾರು ಸನ್ನದುದಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಕುಂದಾಪುರದ ಕೋಟೇಶ್ವರ ಸಮೀಪವಿರುವ ಕೆ.ಎಸ್.ಬಿ.ಸಿ.ಎಲ್ ಡಿಪೋ ಕಚೇರಿ ಎದುರು ಕುಂದಾಪುರ ತಾಲೂಕು ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಣ್ಣ ಸಣ್ಣ ಬಾರ್ ಹಾಗೂ ವೈನ್ ಶಾಪ್ ಹೊಂದಿರುವವರಿಗೆ ಹೊಸ ವ್ಯವಸ್ಥೆಯಿಂದ ಸಮಸ್ಯೆಗಳಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಮದ್ಯ ಖರೀದಿಗೆ ತೊಡಕಾಗುತ್ತಿದೆ.ಕಳೆದ ನಾಲ್ಕೈದು ದಿನಗಳಿಂದ ಬಹಳಷ್ಟು ಅನಾನುಕೂಲವಾಗಿದೆ. ಸನ್ನದುದಾರರ ಹಿತದೃಷ್ಟಿಯಿಂದ ಏಪ್ರಿಲ್ ತಿಂಗಳಾಂತ್ಯದವರೆಗೆ ಹೊಸ ಮತ್ತು ಹಳೇ ಪದ್ಧತಿಯಲ್ಲಿ ಮದ್ಯ ಖರೀದಿಸಲು ಅನುಕೂಲ ಮಾಡಿಕೊಡುವಂತೆ ಎಂದು ಕುಂದಾಪುರ ತಾಲೂಕು ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವೈ. ಕರುಣಾಕರ್ ಶೆಟ್ಟಿ, ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಸಂಚಾಲಕ ಡೇರಿಕ್ ಆಗ್ರಹಿಸಿದರು.
ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಲಾಯಿತು.
Kshetra Samachara
07/04/2022 06:24 pm