ಕುಂದಾಪುರ: ರಾಜ್ಯ ಹೆದ್ದಾರಿಯ ಅಂಪಾರು ಗ್ರಾಮದ ಮೂಡುಬಗೆ ಕೋಟೆಬೆಟ್ಟು ಕ್ರಾಸ್ ಬಳಿ ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸಂಭವಿಸಿದೆ .ಮೃತ ಸವಾರರನ್ನು ಭಾಸ್ಕರ ಶೆಟ್ಟಿ (53) ಎಂದು ಗುರುತಿಸಲಾಗಿದೆ.
ಸಿದ್ದಾಪುರ ಕಡೆಯಿಂದ ವೇಗವಾಗಿ ಬಂದ ಬುಲೆಟ್ ಬೈಕ್ ಎದುರು ಕಡೆಯಿಂದ ಬರುತ್ತಿದ್ದ ಬೈಕಿಗೆ ನೇರವಾಗಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಢಿಕ್ಕಿ ಪರಿಣಾಮ ಬೈಕ್ ಸವಾರ ಕೆ. ಭಾಸ್ಕರ ಶೆಟ್ಟಿ (53) ಅವರು ರಸ್ತೆಗೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಕುಂದಾಪುರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.ಭಾಸ್ಕರ ಶೆಟ್ಟಿ ಅವರು ಕೋಟೆಬೆಟ್ಟುವಿನಲ್ಲಿ ನೂತನವಾಗಿ ಮನೆ ನಿರ್ಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ತವ್ಯದಿಂದ ಸ್ವಲ್ಪ ಬೇಗ ಮನೆಗೆ ಬಂದಿದ್ದರು. ಮನೆ ನಿರ್ಮಾಣಕ್ಕೆ ಬೇಕಾಗುವ ಮರದ ಬಗ್ಗೆ ಮಾತನಾಡಲು ಮನೆಯಿಂದ ನೇರವಾಗಿ ಸಿದ್ದಾಪುರಕ್ಕೆ ಹೊರಟಿದ್ದರು. ಮನೆ ರಸ್ತೆಯಿಂದ ಮುಖ್ಯ ರಸ್ತೆ ಕ್ರಾಸ್ ಆಗುತ್ತಿದ್ದಂತೆ ಎದುರು ಕಡೆಯಿಂದ ಅತೀ ವೇಗವಾಗಿ ಬಂದ್ ಬುಲೆಟ್ ಬೈಕ್ ಢಿಕ್ಕಿ ಹೊಡೆದಿದೆ. ಭಾಸ್ಕರ ಶೆಟ್ಟಿ ಅವರು ಹೆಲ್ಮೆಟ್ ಧರಿಸಿದ್ದರೂ, ಅಪಘಾತದಲ್ಲಿ ಹೆಲ್ಮೆಟ್ ಸಂಪೂರ್ಣ ಒಡೆದು ಹೋಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/08/2022 07:24 pm