ಶಿರ್ವ: ನೀರು ತರಲು ಹೋದ ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶಿರ್ವದಲ್ಲಿ ನಡೆದಿದೆ. ಸರೋಜಿನಿ ಆಚಾರ್ಯ (54) ಮೃತ ಮಹಿಳೆಯಾಗಿದ್ದಾರೆ.
ಮೊನ್ನೆ ರಾತ್ರಿ ಮನೆಯ ಅಂಗಳದಲ್ಲಿರುವ ಬಾವಿಯಿಂದ ನೀರು ತರಲು ಹೋಗಿದ್ದ ವೇಳೆ ಬಿದ್ದಿದ್ದಾರೆ. ಶಬ್ದ ಕೇಳಿ ಮನೆಯಲ್ಲಿದ್ದ ಪತಿ ಸುಂದರ ಆಚಾರ್ಯ ಹೋಗಿ ನೋಡಿದಾಗ ನೀರು ತೆಗೆಯಲು ಹಾಕಿದ್ದ ಕಂಬ, ಹಗ್ಗ ಮತ್ತು ಪತ್ನಿ ಸರೋಜಿನಿ ನೀರಿಗೆ ಬಿದ್ದಿರುವುದು ಗೊತ್ತಾಗಿದೆ.
ಕೂಡಲೆ ಸರೋಜಿನಿಯವರನ್ನು ಮೇಲಕ್ಕೆತ್ತಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿನ ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/06/2022 12:10 pm