ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಮೀನುಗಾರಿಕೆ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

ಮಲ್ಪೆ :ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ಬೋಟಿನಿಂದ ಅಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಮೃತರನ್ನು ಭಟ್ಕಳ ಕಿತ್ರೆ ಗ್ರಾಮದ ಮಾರುಕೆರೆಯ ಚಂದ್ರು ಗೊಂಡ (42) ಎಂದು ಗುರುತಿಸಲಾಗಿದೆ. ಇವರು ಮೇ ೧೫ರಂದು ರಾತ್ರಿ ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ಬೋಟ್‌ನಲ್ಲಿ ಕೆಲಸ ಮಾಡಿಕೊಂಡಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಇವರ ಮೃತದೇಹ ಮೇ 17ರಂದು ಬೆಳಗಿನ ಜಾವ ಮಲ್ಪೆ ಲೈಟ್ ಹೌಸ್ ಬಳಿ ದೊರೆತಿದೆ.ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

18/05/2022 12:08 pm

Cinque Terre

2.71 K

Cinque Terre

0

ಸಂಬಂಧಿತ ಸುದ್ದಿ