ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಶವ ಹಾಡಿಯಲ್ಲಿ ಪತ್ತೆ

ಹಿರಿಯಡ್ಕ: ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹವು ಅಸ್ಥಿಪಂಜರದ ಸ್ಥಿತಿಯಲ್ಲಿ ಮೇ 7ರಂದು ಸಂಜೆ 5.30ರ ಸುಮಾರಿಗೆ ಹಾಡಿಯೊಂದರಲ್ಲಿ ಪತ್ತೆಯಾಗಿದೆ.

ಮೃತ ಯುವಕನನ್ನು ಪೆರ್ಡೂರು ಪಕ್ಕಾಲು ನಿವಾಸಿ ಮಂಜುನಾಥ ಆಚಾರಿ ಎಂಬವರ ಮಗ ನಾಗರಾಜ್ (30) ಎಂದು ಗುರುತಿಸಲಾಗಿದೆ. ಇವರು 2021ರ ಆಗಸ್ಟ್ ತಿಂಗಳಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಅವರನ್ನು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಮೇ 7ರಂದು ಸಂಜೆ ಹಾಡಿಯಲ್ಲಿ ತಲೆ ಬುರುಡೆ ಮತ್ತು ಎಲುಬುಗಳು ಹಾಗೂ ಕಪ್ಪುಬಣ್ಣದ ಪ್ಯಾಂಟ್ ಮತ್ತು 2 ಖಾಲಿ ಪ್ಲಾಸ್ಟಿಕ್ ಬಾಟಲುಗಳು ಪತ್ತೆಯಾಗಿದ್ದವು. ಈ ಕುರಿತು ನಾಗರಾಜ್ ಆಚಾರ್ಯರ ಮನೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬಟ್ಟೆ ಹಾಗೂ ಚಪ್ಪಲಿ ಮೂಲಕ ಇವು ನಾಗರಾಜ್ ಆರ್ಚಾಯರ ಮೃತದೇಹ ಎಂಬುದನ್ನು ದೃಢಪಡಿಸಿದರು.

ಇವರು ತಾನು ತೆಗೆದುಕೊಂಡು ಹೋದ ಹಗ್ಗದಿಂದ ನೇಣು ಬಿಗಿದುಕೊಂಡು ಅಥವಾ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.ಹಿರಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

09/05/2022 08:15 am

Cinque Terre

4.48 K

Cinque Terre

0

ಸಂಬಂಧಿತ ಸುದ್ದಿ