ಕೋಟ: ಜೆಸಿಬಿ ಮುಖಾಂತರ ತೆಂಗಿನಮರವನ್ನು ತೆರವುಗೊಳಿಸುವ ಸಂದರ್ಭದಲ್ಲಿ ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಕಾವಡಿ ಗ್ರಾಮದ ಸಸಿಹಿತ್ಲು ಎಂಬಲ್ಲಿ ನಡೆದಿದೆ.
ಏಪ್ರಿಲ್ 15 ರ ಮಧ್ಯಾಹ್ನ ಬೀಳುವ ಸ್ಥಿತಿಯಲ್ಲಿದ್ದ ತೆಂಗಿನಮರ ತೆರೆವುಗೊಳಿಸುವ ಕಾರ್ಯ ನೆಡೆಸಲಾಗುತ್ತಿತ್ತು. ಆದರೆ ಜೆಸಿಬಿ ಚಾಲಕ ಮಾತ್ರ ಯಾವುದೇ ಸೂಚನೆಯನ್ನು ನೀಡದೆ ಒಮ್ಮೆಲೆ ಮರವನ್ನು ದೂಡಿದ ಪರಿಣಾಮ ರಮೇಶ್ ಎನ್ನುವವರ ಮೇಲೆ ಮರ ಬಿದಿದ್ದೆ ಎನ್ನಲಾಗಿತ್ತು. ನಂತರ ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ರವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಮೃತ ಪಟ್ಟಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/04/2022 06:10 am