ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಗುಜರಿ ಅಂಗಡಿ ಸ್ಪೋಟದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ನೆರವು

ಕಾಪು : ಮಲ್ಲಾರ್ ನ ಫಕೀರಣಕಟ್ಟೆ ಎಂಬಲ್ಲಿ ನಡೆದ ಗುಜರಿ ಅಗಂಡಿ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟ ಚಂದ್ರನಗರದ ಜನತಾ ಕೊಲನಿಯ ನಯಾಝ್ ರವರ ಮನೆಗೆ ಕಾಪು ಜಮಾಅತೆ ಇಸ್ಲಾಮಿ ಹಿಂದ್ ವರ್ತುಲದ ತಂಡವು ಭೇಟಿ ನೀಡಿತು.

ಮನೆಯವರಿಗೆ ಸಾಂತ್ವನ ಹೇಳಿ ಅಗತ್ಯದ ಆಹಾರ ಸಾಮಗ್ರಿ ಮತ್ತು ಆರ್ಥಿಕ ಸಹಾಯ ನೀಡಿ, ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆಶ್ವಾಸನೆ ನೀಡಲಾಯಿತು. ತಂಡದಲ್ಲಿ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ, ಕಾರ್ಯಕರ್ತರಾದ ಮುಹಮ್ಮದ್ ಹಾಶಿಮ್ ಸಾಹೇಬ್, ಮುಹಮ್ಮದ್ ಅಲಿ, ಆಸೀಫ್ ದಸ್ತಗೀರ್ ಸಾಹೇಬ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/03/2022 07:58 pm

Cinque Terre

3.49 K

Cinque Terre

0

ಸಂಬಂಧಿತ ಸುದ್ದಿ