ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೇನು ನೊಣ ಕಚ್ಚಿ ವಿದ್ಯಾರ್ಥಿ ಗಾಯ : ಆಸ್ಪತ್ರೆಗೆ ದಾಖಲು

ಉಡುಪಿ: ನಗರದ ಚಿಟ್ಪಾಡಿ ಸಮೀಪ ಜೇನು ನೊಣ ಕಚ್ಚಿದ ಪರಿಣಾಮ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ನಡೆದಿದೆ.

ಬಾಗಲಕೋಟೆ ಮೂಲದ ಪುಂಡಲೀಕ ಗಾಯಗೊಂಡ ವಿದ್ಯಾರ್ಥಿಯಾಗಿದ್ದಾನೆ.ಗುಂಪು ಗುಂಪಾಗಿ ಬಂದ ಜೇನು ನೊಣ ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದೆ.

ಬಳಿಕ ಗಾಯಗೊಂಡ ಪುಂಡಲೀಕನನ್ನು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಎಂಬುವರು ರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

ಈ ವಿದ್ಯಾರ್ಥಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

Edited By : Nirmala Aralikatti
Kshetra Samachara

Kshetra Samachara

29/12/2020 12:10 pm

Cinque Terre

10.71 K

Cinque Terre

0

ಸಂಬಂಧಿತ ಸುದ್ದಿ