ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಕುದ್ರೆಬೆಟ್ಟುವಿನಲ್ಲಿ ಭಾನುವಾರ ತಡರಾತ್ರಿ ನಡೆದ ಓಮ್ನಿ ಕಾರು ಮತ್ತು ಬೈಕ್ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾರೆ. ಕಲ್ಲಡ್ಕ ನಿವಾಸಿ ಯತಿರಾಜ್ (30) ಮೃತಪಟ್ಟವರು. ಕುದ್ರೆಬೆಟ್ಟು ಎಂಬಲ್ಲಿ ಓಮ್ನಿ ಮತ್ತು ಬೈಕ್ ಭಾನುವಾರ ತಡರಾತ್ರಿ ಡಿಕ್ಕಿಯಾಗಿತ್ತು. ಕೂಡಲೇ ಬೈಕಿನಲ್ಲಿದ್ದ ಯತಿರಾಜ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯತಿರಾಜ್ ಹಿಂದೂ ಸಂಘಟನೆಯೊಂದರ ಸಕ್ರಿಯ ಕಾರ್ಯಕರ್ತರಾಗಿದ್ದರು.
Kshetra Samachara
23/11/2020 10:06 am