ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಬೆಂಗಳೂರಿನ ಇಬ್ಬರು ಯುವಕರು ಸಮುದ್ರಪಾಲು

ಕಾಪು:  ಬೆಂಗಳೂರಿನಿಂದ ಬಂದ ಯುವಕರಿಬ್ಬರು ಸಮುದ್ರ ಪಾಲಾದ ಘಟನೆ ಕಾಪು ಬೀಚ್ ನಲ್ಲಿ ಭಾನುವಾರ ಸಂಜೆ ನಡೆದಿದೆ.

ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರುಪಾಲಾಗಿದ್ದು, ಇಬ್ಬರೂ ಯುವಕರ ಶವ ಮೇಲಕ್ಕೆತ್ತಲಾಗಿದೆ.

ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ಭಾನುವಾರ ಸಂಜೆ ಕಾಪು ಸಮುದ್ರ ತೀರದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ‌.

ನೀರು ಪಾಲಾಗುತ್ತಿದ್ದ ರೂಪೇಶ್ ಅವರನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ ಅವರು ವಿನೀತ್, ಪ್ರಥಮ್, ದಾಮೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.

ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ರೂಪೇಶ್ ಮೃತಪಟ್ಟಿದ್ದರು.

ನೀರಿನಲ್ಲಿ ಮುಳುಗಿದ ಕಾರ್ತಿಕ್ ಅವರೂ ಮೃತಪಟ್ಟಿದ್ದು, ಅವರ ಶವ ಕೂಡ ಸಿಕ್ಕಿದೆ.

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/10/2020 07:32 pm

Cinque Terre

20.19 K

Cinque Terre

8

ಸಂಬಂಧಿತ ಸುದ್ದಿ