ತಾಲೂಕಿನ ಬೆಳ್ಳಾರದ ಸುವರ್ಣಮುಖಿ ಹಳ್ಳದಲ್ಲಿ ಗುರುವಾರ ಹಸುವಿನ ಮೈ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟ ವರುಣ್ (28) ಮೃತ ದೇಹವು, ಅಗ್ನಿಶಾಮಕ ಸಿಬ್ಬಂದಿಯ ಎರಡು ದಿನಗಳ ಶೋಧದ ನಂತರ ಶನಿವಾರ ಪತ್ತೆಯಾಗಿದೆ.
ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ತೇಜಸ್ವಿನಿ, ಸೇರಿದಂತೆ ಹಲವು ಪೊಲೀಸ್ ಕೃಷಿ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು, ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ವರದಿ ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್ ತುಮಕೂರು
PublicNext
08/10/2022 03:54 pm