ಸ್ಟಾರ್ ನಿರ್ಮಾಪಕ ಅಂತ ಹೆಸರು ಮಾಡಿರೋ ಉಮಾಪತಿ ಶ್ರೀನಿವಾಸ್ ಗೌಡ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆದಂಗೆ ಕಾಣ್ತಿದೆ.
ಈ ಹಿಂದೆ ಬೊಮ್ಮನಹಳ್ಳಿ ವಿಧಾನಸಭೆ ಯಿಂದ ಸ್ಪರ್ಧೆ ಮಾಡ್ತಿನಿ ಅಂತ ಹೇಳಿದ್ದ ಉಮಾಪತಿ, ಯಾವ ಪಕ್ಷ ಅಂತ ಇನ್ನೂ ನಿರ್ಧಾರ ಮಾಡಿಲ್ಲ ಅಂತ ಹೇಳಿದ್ರು. ಆದ್ರೆ ಸದ್ಯ ರಾಜ್ಯದಲ್ಲಿ ನಡೆಯುತ್ತಿರೋ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆಹಾಕಿ ಕಾಂಗ್ರೆಸ್ ಸೇರ್ಪಡೆ ಸುಳಿವು ನೀಡಿದ್ದರೆ.
ಚಿತ್ರದುರ್ಗದಲ್ಲಿ ನಡೆಯುತ್ತಿರೋ ಯಾತ್ರೆಯಲ್ಲಿ ಪಾಲ್ಗೊಂಡ ಉಮಾಪತಿ ಯಾತ್ರೆಗೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೆ ಉಪಾರ ಸವಿದು ಯಾತ್ರೆಯಲ್ಲಿ ಭಾಗಿಯಾದ್ರು. ಯಾತ್ರೆಯಲ್ಲಿ ಉಮಾಪತಿಯನ್ನ ಡಿಕೆಶಿ ಕರೆದು ರಾಹುಲ್ ಗಾಂಧಿಗೆ ಪರಿಚಯ ಮಾಡಿಸಿ ಜೊತೆಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿಸಿದ್ರು.
ಸದ್ಯ 2023ರ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಬೊಮ್ಮನಹಳ್ಳಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರೋ ಉಮಾಪತಿ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಗೆದ್ದು ಕಂಪೇಗೌಡ ಆಸ್ಪತ್ರೆಯ ಅಧ್ಯಕ್ಷ ಕೂಡ ಆಗಿದ್ದಾರೆ.
PublicNext
11/10/2022 12:22 pm