ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಬಡ ಕುಟುಂಬದ ಸಾಲ ತೀರಿಸಿ, ಮನೆ ಉಳಿಸಿಕೊಟ್ಟ ಜೆಡಿಎಸ್ ಮುಖಂಡ ಪಾಲನೇತ್ರಯ್ಯ

ತುಮಕೂರು: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹರಳೂರು ಗ್ರಾಮದ ದಲಿತ ಕುಟುಂಬದ ಬ್ಯಾಂಕ್ ಸಾಲ ತೀರಿಸಿ ಹರಾಜಿಗೆ ಬಂದಿದ್ದ ಮನೆ ಉಳಿಸಿಕೊಡುವ ಮೂಲಕ ಗೂಳೂರು ಜಿಲ್ಲಾಪಂಚಾಯ್ತಿ ಉಸ್ತುವಾರಿ ಅಧ್ಯಕ್ಷ ಜಿ.ಪಾಲನೇತ್ರಯ್ಯ ಮಾನವೀಯತೆ ಮೆರೆದಿದ್ದಾರೆ.

ಗೂಳೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹರಳೂರು ಗ್ರಾಮದ ದಲಿತ ಸಮುದಾಯದ ಜಯಮ್ಮ ವೆಂಕಟೇಶಯ್ಯ ಅವರು ತಮ್ಮ ಮಗ ಗೋವಿಂದರಾಜುಗಾಗಿ ನೇರ ಸಾಲ ಯೋಜನೆಯಡಿಯಲ್ಲಿ ಗ್ರಾಮಶಕ್ತಿ ಎಂಬ ಖಾಸಗಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರು. ಸಾಲದ ಹಣ ಎರಡು ಕಂತು ಬಾಕಿ ಉಳಿದಿದ್ದರಿಂದ ಬಡ್ಡಿ ಸುಸ್ತಿಯಾಗಿತ್ತು. ಬ್ಯಾಂಕಿನವರು ಮನೆ ಹರಾಜು ಹಾಕುವುದಾಗಿ ಜಯಮ್ಮನಿಗೆ ನೋಟೀಸ್ ನೀಡಿದ್ದರು. ಇದರಿಂದ ಆಘಾತಕ್ಕೆ ಒಳಗಾದ ಜಯಮ್ಮ ಅವರ ಕುಟುಂಬದವರು ಪಾಲನೇತ್ರಯ್ಯ ಅವರಿಗೆ ತಿಳಿಸಿ ಸಹಾಯ ಕೋರಿದ್ದರು. ತಕ್ಷಣವೇ ಪಾಲನೆತ್ರಯ್ಯ ಅವರು ಗ್ರಾಮಶಕ್ತಿ ಬ್ಯಾಂಕಿನ ಹತ್ತಿರ ಬಂದು ವಿಚಾರಿಸಿದಾಗ ಬಾಕಿ ಹಣ 3.85 ಲಕ್ಷ ರೂ. ಕಟ್ಟಬೇಕು ಎನ್ನುವುದು ತಿಳಿದು ಬಂದಿದೆ.

ಪಾಲನೇತ್ರಯ್ಯ ಅವರು ಬ್ಯಾಂಕ್ ಅಧಿಕಾರಿಗಳ ಜೊತೆ ಅವರು ತೀರ ಬಡತನದಲ್ಲಿ ಇದ್ದಾರೆ. ಹಾಗಾಗಿ ತಾನೇ ವೈಯಕ್ತಿಕವಾಗಿ 1,50,000 ಹಣ ಬ್ಯಾಂಕಿಗೆ ಪಾವತಿಸುತ್ತೇನೆ. ಸಾಲ ಚುಕ್ತಾ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ. ಹಣ ಪಾವತಿಸಿ ಬಡ ಕುಟುಂಬದ ಮನೆ ಉಳಿಸುವ ಮೂಲಕ ಅವರ ಕುಟುಂಬಕ್ಕೆ ನೆರವಾದರು. ಈ ವೇಳೆ ಜೆಡಿಎಸ್ ಪರಿಶಿಷ್ಟ ಜಾತಿ ತಾಲ್ಲೂಕು ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಹಾಗೂ ಜೆಡಿಎಸ್ ಮುಖಂಡ ಹರಳೂರು ಪ್ರಕಾಶ್ ಉಪಸ್ಥಿತರಿದ್ದರು. ಪಾಲನೇತ್ರಯ್ಯ ಅವರ ಈ ಕೆಲಸಕ್ಕೆ ಗೂಳೂರು ಹೋಬಳಿ ಭಾಗದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Edited By : Vijay Kumar
Kshetra Samachara

Kshetra Samachara

09/10/2022 07:13 pm

Cinque Terre

10.84 K

Cinque Terre

0