ಮಧುಗಿರಿ: ಶಾಸಕರಾದ ಎಂ.ವಿ. ವೀರಭದ್ರಯ್ಯ ಅವರು 2023ರ ಚುನಾವಣೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಅವರನ್ನು ಮನವೊಲಿಸಲು ಕ್ಷೇತ್ರದ ಜೆಡಿಎಸ್ ಮುಖಂಡರುಗಳು, ಕಾರ್ಯಕರ್ತರುಗಳು, ನೂರಾರು ವಾಹನಗಳ ಮೂಲಕ ತೆರಳಿ ಭಾನುವಾರದಂದು ಬೆಂಗಳೂರಿನ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಅವರು ಭೇಟಿಯಾಗಿ ಕ್ಷೇತ್ರದಲ್ಲಿನ ರಾಜಕೀಯ ಸ್ಥಿತಿಯನ್ನು ಮನವರಿಕೆ ಮಾಡಲಾಗುವುದೆಂದು ಪುರಸಭೆ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್ ಹಾಗೂ ಕಾರ್ಯಕರ್ತರು ತಿಳಿಸಿದ್ದಾರೆ.
ಮಧುಗಿರಿ ತಾಲೂಕಿನ ಅಪಾರ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಬಹಳ ನೋವುಂಟು ಆಗಿದೆ. ಅಲ್ಲದೆ ರಾಜಣ್ಣನವರ ವಿರುದ್ಧ ಗೆಲ್ಲಲೇಬಹುದಾದ ಏಕೈಕ ವ್ಯಕ್ತಿ ಎಂದರೆ ಸರಳ ಸಜ್ಜನಿಕೆಯ ವೀರಭದ್ರಯ್ಯ ಅವರನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡಿದರೂ ಸಹ ನಾವು ಮಧುಗಿರಿ ಕ್ಷೇತ್ರದಲ್ಲಿ ಕಳೆಗುಂದಲಿದೆ ಜೆಡಿಎಸ್ ಆದ್ದರಿಂದ ಅಕ್ಟೋಬರ್ 9ರ ಭಾನುವಾರ ಬೆಳಿಗ್ಗೆ 7:00 ಸಮಯಕ್ಕೆ ಮಧುಗಿರಿ ದಂಡಿ ಮಾರಮ್ಮ ದೇವಸ್ಥಾನದಿಂದ ಸ್ವಯಂ ಪ್ರೇರಿತರಾಗಿ ಎಲ್ಲಾ ವೀರಭದ್ರಯ್ಯ ಅವರ ಅಭಿಮಾನಿಗಳು ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಶಾಸಕರ ಬೆಂಗಳೂರು ಮನೆ ಹತ್ತಿರ ಎಲ್ಲರೂ ಒಗ್ಗಟ್ಟಾಗಿ ಹೋಗಿ ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಮನವಿ ಮಾಡಿ ನಂತರ ಕುಮಾರಸ್ವಾಮಿ ಅವರ ಮನೆಯ ಹತ್ತಿರ ಹೋಗಲು ಇಚ್ಚಿಸಿದ್ದಾರೆ. ಎಲ್ಲರೂ ಬರುವಂತೆ ಮನವಿ ಮಾಡಿದ್ದಾರೆ.
ವರದಿ: ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು
PublicNext
08/10/2022 10:56 pm