ಕೊರಟಗೆರೆ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಕರೆದಿದ್ದ ಸಭೆಯಲ್ಲಿ ತಾಲೂಕು ಮಟ್ಟದ ಸಭೆಯಲ್ಲಿ ಅಧಿಕಾರಿಗಳು ಗೈರು ಆಗಿರುವುದನ್ನು ಖಂಡಿಸಿ ಸಭೆಯನ್ನು ಮುಖಂಡರು ಬಹಿಷ್ಕರಿಸಿದರು.
ಸಭೆಯಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಹಾಜರಿದ್ದು ವಾಲ್ಮೀಕಿ ಸಮುದಾಯಕ್ಕೆ ಅಗೌರವ ಸೂಚಿಸಲಾಗಿದೆ ಎಂದು ಆರೋಪಿಸಿದರು. ತಾಲೂಕು ಕಚೇರಿ ಅಕ್ಕ-ಪಕ್ಕದಲ್ಲಿರುವ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ಇದ್ದು ಕೊಂಡೆ ಸಭೆಗೆ ಗೈರಾಗಿದ್ದರು. ಸಭೆಯನ್ನು ಬಹಿಷ್ಕರಿಸಿ ಹೊರ ಬಂದ ಕೆಲವೇ ಕ್ಷಣಗಳಲ್ಲಿ ಪ್ರತಿಭಟಿಸುವ ಸ್ಥಳಕ್ಕೆ ಧಾವಿಸಿ ಮುಖಂಡರುಗಳನ್ನು ಮನವೊಲಿಸಲು ಯತ್ನಿಸಿದ್ದ ಘಟನೆ ನಡೆಯಿತು.
ಸಮುದಾಯದ ಮುಖಂಡರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಆರ್ ಓಬಳರಾಜು ಮಾತನಾಡಿ, ತಾಲೂಕಿನಲ್ಲಿ ಸುಮಾರು 25 ಇಲಾಖೆಗಳಿದ್ದು, ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಪೂರ್ವಭಾವಿ ಸಭೆಗೆ ಬಂದಿದ್ದಾರೆ. ಅಕ್ಟೋಬರ್ 9ರಂದು ಸರ್ಕಾರದಿಂದ ಆಚರಿಸುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ವಾಲ್ಮೀಕಿ ಜಯಂತಿಯನ್ನು ಪ್ರಕಟಿಸಿದ ಸುಮಾರು 11 ವರ್ಷಗಳಿಂದಲೂ ಕೊರಟಗೆರೆ ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಮೀನಮೇಷ ಎಣಿಸುತ್ತಿರುವುದ್ದಕ್ಕೆ ಅಧಿಕಾರಿ ಗಳ ನಿರ್ಲಕ್ಷವೇ ಕಾರಣ ಸುಮಾರು ವರ್ಷಗಳ ಹಿಂದೆ ಯೇ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಸರ್ಕಾರವು ಸುಮಾರು ಒಂದು ಕೋಟಿ ರೂ ಗಳನ್ನು ಮಿಸಲ್ಲಿಟ್ಟಿ ದ್ದು ಇಲ್ಲಿಯವರೆಗೆ ಕೆ ಆರ್ ಐ ಡಿ ಎಲ್ ಸಂಸ್ಥೆಯು ಕಾಮ ಗಾರಿಯನ್ನು ಪ್ರಾರಂಭ ಮಾಡಿರುವುದಿಲ್ಲ ಮತ್ತು ಯಾವ ಸಭೆಗಳಿಗೂ ಕೆ ಆರ್ ಐ ಡಿ ಎಲ್ ಸಂಸ್ಥೆಯ ಎಇಇ ಹಾಜರಾಗುವುದಿಲ್ಲ, ಮೂಲ ಭೂತ ಸೌಕರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿರುವ ಮಾಹಿತಿ ತಿಳಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಕೆ.ಎನ್ ಲಕ್ಷ್ಮೀ ನಾರಾಯಣ,ಸದಸ್ಯರಾದ ಪುಟ್ಟ ನರಸಪ್ಪ, ಮಾಜಿ ಸದಸ್ಯ ಲಾರಿ ಸಿದ್ದಪ್ಪ, ಮಾಜಿ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಸಂಜೀವಪ್ಪ, ಕೇಶವ್ ಮೂರ್ತಿ, ಮೀಸೆ ಗಂಗಾಧರಪ್ಪ, ಕೆ ವಿ ಮಂಜುನಾಥ್, ರಮೇಶ್ , ಸತ್ಯ ನಾರಾಯಣ್, ರಂಗ ನಾಥ್, ಗೊಂದಿಹಳ್ಳಿ ರಂಗರಾಜು, ಕಾರ್ ಮಹೇಶ್, ಕವಿತಾ ನರಸಪ್ಪ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.
ವರದಿ ರಾಘವೇಂದ್ರ ದಾಸರಹಳ್ಳಿ,ಪಬ್ಲಿಕ್ ನೆಕ್ಸ್ಟ್, ತುಮಕೂರು
PublicNext
03/10/2022 10:23 pm