ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಭಾರತ್ ಜೋಡೋ ಚುನಾವಣಾ ಉದ್ದೇಶದಿಂದ ಹಮ್ಮಿಕೊಳ್ಳುತ್ತಿಲ್ಲ: ಮಾಜಿ ಸಚಿವೆ ಉಮಾಶ್ರಿ

ತುಮಕೂರು: ಭಾರತ್ ಜೋಡೋ ಕಾರ್ಯಕ್ರಮ ಚುನಾವಣಾ ಉದ್ದೇಶದಿಂದ ಹಮ್ಮಿಕೊಳ್ಳುತ್ತಿಲ್ಲ, ಜಾತಿ ಹಾಗೂ ಧರ್ಮದ ಆದಾರದ ಮೇಲೆ ಛಿದ್ರವಾಗಿರುವ ಭಾರತವನ್ನು ಒಗ್ಗೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಚಿವೆ ಉಮಾಶ್ರಿ ತಿಳಿಸಿದರು.

ತುಮಕೂರಿನ ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಕರೆದಿದ್ದ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತ ಧರ್ಮ,ಜಾತಿ ಆಧಾರದ ಮೇಲೆ ವಿಘಟನೆಗೊಂಡಿದೆ ಸಂವಿಧಾನದ ಆಶಯದಡಿ ಕಾಂಗ್ರೆಸ್ ಅಧಿನಾಯಕರಾದ ರಾಹುಲ್ ಗಾಂಧಿಯವರು ಛಿಧ್ರವಾಗಿರುವ ಭಾರತವನ್ನು ಐಕ್ಯತೆ,ಸಹೋದರತ್ವಗಳ ಅಡಿಯಲ್ಲಿ ಒಗ್ಗೂಡಿಸಲು ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದು ನಾವೆಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

Edited By : Manjunath H D
PublicNext

PublicNext

26/09/2022 06:58 pm

Cinque Terre

27.42 K

Cinque Terre

0

ಸಂಬಂಧಿತ ಸುದ್ದಿ