ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಅಕ್ರಮ ಜೂಜಾಟ, ಮದ್ಯಮಾರಾಟಕ್ಕೆ ಪೊಲೀಸರಿಂದಲೇ ಕುಮ್ಮಕ್ಕು; ಶಾಸಕ ಗೌರೀಶಂಕರ್

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಸುರೇಶ್ ಗೌಡನ ಕೃಪೆಯಿಂದ ಬಂದಿರುವ ಪೊಲೀಸ್ ಅಧಿಕಾರಿಗಳು ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಶಾಸಕ ಡಿ ಸಿ ಗೌರೀಶಂಕರ್ ವಾಗ್ದಾಳಿ ನಡೆಸಿದರು.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿರೇಹಳ್ಳಿ ಭಾಗದಲ್ಲಿ ಅಕ್ಕರಮ ಜೂಜಾಟ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿದೆ,ಪೊಲೀಸ್ ಅಧಿಕಾರಿಗಳೇ ಈ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ.ಈ ಅಕ್ರಮ ದಂಧೆಯ ಪರಿಣಾಮವಾಗಿ ಅಮಾಯಕ ಹೆಣ್ಣು ಮಗಳ ಅತ್ಯಾಚಾರ ನಡೆದು ಕೊಲೆಯಾಯಿತು,ಅಮಾಯಕ ಹೆಣ್ಣುಮಗಳ ಸಾವಿಗೆ ಪೊಲೀಸ್ ಇಲಾಖೆಯ ಹೊಣೆಗೇಡಿತನವೇ ಕಾರಣ ಎಂದು ಆರೋಪಿಸಿದರು.

ಮಾಜಿ ಶಾಸಕರ ಕೃಪೆಯಿಂದ ಬಂದಿರುವ ಪೊಲೀಸ್ ಅಧಿಕಾರಿಗಳು ಕೆಲವರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ,ಅಮಾಯಕರಿಗೆ ಅನ್ಯಾಯವಾಗುತ್ತಿವೆ,ಆಡಳಿತಾರೂಡ ಸರ್ಕಾರ ಕಮೀಷನ್ ಲಾಭಿಯಲ್ಲಿ ಮುಳುಗಿದೆ ಎಂದು ಹರಿಹಾಯ್ದಿದ್ದಾರೆ.

Edited By : Shivu K
PublicNext

PublicNext

13/09/2022 12:02 pm

Cinque Terre

24.96 K

Cinque Terre

0