ತುಮಕೂರು: ಅಡುಗೆ ಮನೆಯಲ್ಲಿ ಬೃಹತ್ ಗಾತ್ರದ ಹಾವು ಕಂಡು ಕುಟುಂಬದವರು ಬೆಚ್ಚಿಬಿದ್ದಿರುವ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ತುಮಕೂರಿನ ರಂಗಾಪುರ ನಿವಾಸಿ ಅರುಣ್ ಕುಮಾರ್ ಮನೆಯಲ್ಲಿ ಕೇರೆ ಹಾವು ಕಾಣಿಸಿಕೊಂಡಿದೆ, ಅಡುಗೆ ಮನೆ ತುಂಬಾ ಕೇರೆ ಹಾವು ಹರಿದಾಡಿದ್ದು ಪಾತ್ರೆಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಉರಗ ರಕ್ಷಕ ದಿಲೀಪ್ ಸ್ಥಳಕ್ಕೆ ಬಂದು 6 ಅಡಿ ಉದ್ದವಿರುವ ಬೃಹತ್ ಕೇರೆ ಹಾವು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
PublicNext
12/10/2022 07:49 pm