ಪಾವಗಡ ತಾಲ್ಲೂಕಿನ ಕೆ.ರಾಂಪುರ ಮತ್ತು ದೊಡ್ಡಹಳ್ಳಿ ರಸ್ತೆಯ ಮಧ್ಯಭಾಗದಲ್ಲಿ ರೈಲ್ವೆ ಕಾಮಗಾರಿ ಪ್ರಗತಿಯಲ್ಲಿದೆ, ಸದರಿ ರೈಲ್ವೆ ಕಾಮಗಾರಿಯು ಕಳಪೆ ಕಾಮಗಾರಿ ಮಾಡಿರು ವುದರಿಂದ ಕೊತ್ತಿ ಹೋಗಿ ಮಳೆ ಬಂದ ಸಂದರ್ಭದಲ್ಲಿ ಪದೇ ಪದೇ ಮಳೆಯ ನೀರು ರೈತರ ಜಮೀನುಗಳಿಗೆ ನುಗ್ಗಿ ರೈತರ ಟಮೋಟ ಬೆಳೆ ಕೊಳೆತು ನಾಶವಾಗುತ್ತಿದೆ.
ಇದರ ಬಗ್ಗೆ ರೈಲ್ವೆ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಮತ್ತು ಶಾಸಕರಿಗೆ ಹಾಗೂ ತಾಲ್ಲೂಕು ಆಡಳಿತಕ್ಕೆ ಸದರಿ ಜಮೀನಿನ ಮಾಲಿಕರು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ, ಇವರ ಬೇಜಬ್ದಾರಿಯಿಂದ ರೈತರ ಟಮೋಟ ಬೆಳೆಗಳು ಕೊಳೆತು ಲಕ್ಷಾಂತರ ರೂಪಾ ಯಿಗಳು ನಷ್ಟ ಉಂಟಾಗುತ್ತಿದೆ ಅದುದರಿಂದ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಸದರಿ ಜಮೀನಿನ ರೈತರಿಗೆ ಸೂಕ್ತ ಪರಿಹಾರ ಕೊಡಿಸಿ ಕಾಮ ಗಾರಿಯನ್ನು ಸರಿಪಡಿಸ ಬೇಕೆಂದು ವಿನಂತಿ ಹಾಗೂ ರೈಲ್ವೆ ಕಾಮಗಾರಿಯ ಗುತ್ತಿಗೆ ದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಏಕೆಂದರೆ ರೈಲಿನಲ್ಲಿ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ ಇಂತಹ ಕಾಮಗಾರಿ ಮಾಡಿದರಿಂದ ಏನಾದರು ಅನಾಹುತಗಳು ನಡೆದರೆ ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ನಮ್ಮ ಜಮೀನು ನಮಗೆ ಉಳಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.
ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
Kshetra Samachara
11/10/2022 07:34 pm