ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕೆರೆ ಕೋಡಿ ಒಡೆದು ಪಾವಗಡ ಜನತೆ ಕಂಗಾಲು..!

ಪಾವಗಡ: ಪಟ್ಟಣದ ಸಮೀಪದ ಅಗಸರಕುಂಟೆ ತುಂಬಿ ಕೋಡಿ ಒಡೆದು ಸಮೀಪದ ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಸ್ಥಳೀಯರು ಮನೆಯಿಂದ ಹೊರ ಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ.

ಸೋಮವಾರ ರಾತ್ರಿ ಸುರಿದ ಮಳೆಗೆ ಈ ಸ್ಥಿತಿ ನಿರ್ಮಾಣವಾಗಿದ್ದು ಸ್ಥಳೀಯರು ದೂರು ಹಿನ್ನೆಲೆಯಲ್ಲಿ ಪಾವಗಡ ಪುರಸಭೆ ಅಧ್ಯಕ್ಷ ಡಿ. ವೇಲು ರಾಜ್ ಸ್ಥಳ ವೀಕ್ಷಣೆ ನಡೆಸಿ ನೀರಿನ ಅರಿವು ಕಡಿಮೆ ಯಾದ ನಂತರ ಅಗಸರ ಕುಂಟೆ ಕೋಡಿ ಯಿಂದ ದೊಡ್ಡ ರಾಜ ಕಾಲುವೆಗೆ ಸಂಪರ್ಕ ಕಲ್ಪಿಸುವ ಶಾಶ್ವತ ಕಾಲುವೆ ನಿರ್ಮಿಸಲು ಪುರಸಭೆ ಇಲಾಖೆ ಕ್ರಮ ಕೈಗೊಂಡು ಸಮಸ್ಯೆ ಶಾಶ್ವತವಾಗಿ ಬಗೆಹರಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.ಸಮಸ್ಯೆಯಿಂದ ಬಳಲು ತ್ತಿರುವ ಸ್ಥಳೀಯರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡ ಗೋವಿಂದಪ್ಪ, ಬೇಕರಿ ನಾಗರಾಜ್, ಸ್ಥಳೀಯ ನಿವಾಸಿ ಬಿ. ಜೆ.ಪಿ. ರವಿಕುಮಾರ್, ಬೆಸ್ತ ಶ್ರೀನಿವಾಸಲು ಸೇರಿದಂತೆ ಇತರರು ಇದ್ದರು.

Edited By : Manjunath H D
PublicNext

PublicNext

11/10/2022 09:36 pm

Cinque Terre

36.69 K

Cinque Terre

0