ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮಕ್ಕಳಿಗೆ ವಿಶೇಷ ಮನವಿ ಇಟ್ಟು ಸಿದ್ದಲಿಂಗ ಸ್ವಾಮೀಜಿ ಭಾವುಕ ನುಡಿ

ತುಮಕೂರು: ದಸರಾ ರಜೆಗೆ ಮಕ್ಕಳು ಊರಿಗೆ ಹೋಗಬೇಡಿ ಆಡ್ಕೊಂಡು, ಕುಣ್ಕೊಂಡು ಮಠದಲ್ಲೇ ಇರ್ರಿ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಭಾವುಕ ನುಡಿಗಳನ್ನಾಡಿದ್ದಾರೆ.

ಶಾಲೆಗೆ ದಸರಾ ರಜೆ ನೀಡಿರುವ ಕಾರಣ ಊರಿಗೆ ಹೋಗಲು ಸಿದ್ದಗಂಗಾ ಮಠದ ಮಕ್ಕಳು ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಹೋದಾಗ, ನೀವೆಲ್ಲ ಊರಿಗೆ ಹೋದ್ರೆ ಬೇಜಾರಾಗುತ್ತದೆ. ಆಡ್ಕೊಂಡು, ಕುಣ್ಕೊಂಡು, ಹೊಟ್ಟೆ ತುಂಬಾ ಊಟ ಮಾಡ್ಕೊಂಡು ಮಠದಲ್ಲೇ ಇರ್ರಿ ಎಂದು ಭಾವುಕರಾಗಿದ್ದಾರೆ. ಇದನ್ನು ಕಂಡು ಮಕ್ಕಳು ಗದ್ಗದಿತರಾಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯೊಬ್ಬ ಸ್ವಾಮೀಜಿಯವರ ಭಾವುಕ ನುಡಿಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

Edited By : Vijay Kumar
PublicNext

PublicNext

02/10/2022 11:40 pm

Cinque Terre

17.84 K

Cinque Terre

0