ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಅಪಘಾತ ವಲಯ ಎಂದು ಘೋಷಿಸಿ ಸೂಚನಾ ಫಲಕ ಅಳವಡಿಸಬೇಕೆಂದು ಪ್ರತಿಭಟನೆ

ಮಧುಗಿರಿ: ಕಸಬಾ ವ್ಯಾಪ್ತಿಯ ಲಿಂಗೇನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರೋದ್ರಿಂದ ಇದನ್ನು ಅಪಘಾತ ವಲಯ ಎಂದು ಘೋಷಿಸಿ ಸೂಚನಾ ಫಲಕ ಅಳವಡಿಸಬೇಕೆಂದು ಕಾಂಗ್ರೆಸ್ ಮುಖಂಡ ಸಿಪಿಟಿ ರಾಮು ಆಗ್ರಹಿಸಿದರು.

ಮಂಗಳವಾರ ಸಾಯಂಕಾಲ ಶಾಲೆ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವಿದ್ಯಾರ್ಥಿ ಕುಶಾಲ್ ಅಪಘಾತದಲ್ಲಿ ಸಾವನ್ನಪ್ಪಿದ್ದ ಹಾಗಾಗಿ ಇಂದು ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್. ಪಿ.ಟಿ ರಾಮು ಈ ಸ್ಥಳದಲ್ಲಿ ಇತ್ತೀಚೆಗೆ ಹೆಚ್ಚು ಅಪಘಾತಗಳು ನಡೆಯುತ್ತಿದ್ದು ಕಳೆದ ವಾರ ಶಿಕ್ಷಕರೊಬ್ಬರು ಮೃತ ಪಟ್ಟಿದ್ದರು. ನಿನ್ನೆ ಸಾಯಂಕಾಲ ಶಾಲಾ ವಿದ್ಯಾರ್ಥಿಯೊಬ್ಬಳು ಅಪಘಾತಕ್ಕೆ ಬಲಿಯಾಗಿದ್ದಾಳೆ.

ಇಲ್ಲಿ ಯಾವಾಗಲೂ ಅಪಘಾತಗಳು ಸಂಭವಿಸುವುದರಿಂದ ಸಂಬಂಧ ಪಟ್ಟ ಇಲಾಖೆ ಯವರು ಇದನ್ನು ಅಪಘಾತ ವಾಲಯ ಎಂದು ಘೋಷಿಸಿ ಸೂಚನಾ ಫಲಕಗಳನ್ನು ಅಳವಡಿಸಿ ಈ ರಸ್ತೆಯಲ್ಲಿ ಸುರಕ್ಷತೆಗೆ ವೈಜ್ಞಾನಿಕವಾಗಿ ರಸ್ತೆ ಹುಬ್ಬುಗಳನ್ನು ನಿರ್ಮಿಸ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡ ರಾದ ಶಿವಣ್ಣ, ಮೂರ್ತಣ್ಣ, ಮಂಜುನಾಥ್, ಸುವರ್ಣಮ್ಮ ಹಾಗೂ ಊರಿನ ಮುಖ್ಯ ಗ್ರಾಮಸ್ಥರ ಹಾಜರಿದ್ದರುಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

28/09/2022 08:11 pm

Cinque Terre

9.06 K

Cinque Terre

0

ಸಂಬಂಧಿತ ಸುದ್ದಿ