ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಗಣ್ಯರಿಗೆ ಮಕ್ಕಳಿಂದ ವಿಭಿನ್ನ ಸ್ವಾಗತ

ತುಮಕೂರು: ಕೊರಟಗೆರೆ ತಾಲೂಕಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಗುರುವಾರ ವೇದಿಕೆಗೆ ಗಣ್ಯರನ್ನು ಸ್ವಾಗತಿಸಲು ವಿದ್ಯಾರ್ಥಿಗಳು ವಿಶಿಷ್ಟವಾಗಿ ವೀರಭದ್ರ ಕುಣಿತದ ಮೂಲಕ ಸ್ವಾಗತವನ್ನು ಕೋರಿದರು. ವಿದ್ಯಾರ್ಥಿಗಳ ಸ್ವಾಗತಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ವಾಸುದೇವಮೂರ್ತಿ, ಟ್ರಸ್ಟಿಗಳಾದ ಶ್ರೀ ಪ್ರಸಾದ್, ರವಿರಾಜ ಅರಸ್, ಇಸಿಓ ಚಿಕ್ಕಹನುಮಯ್ಯ, ಮುಖ್ಯಶಿಕ್ಷಕ ಸೋಮಣ್ಣ, ಸೇರಿದಂತೆ ಗೊರವನಹಳ್ಳಿ ಮಹಾಲಕ್ಷ್ಮಿ ಶಾಲೆಯ ಶಿಕ್ಷಕರು ಅದು ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳ ವಿಶಿಷ್ಟ ಸ್ವಾಗತಕ್ಕೆ ಎಲ್ಲೆಡೆ ಸಖತ್ ವೈರಲ್ ಆಗಿದೆ.

Edited By : Shivu K
PublicNext

PublicNext

23/09/2022 11:39 am

Cinque Terre

16.32 K

Cinque Terre

0