ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕಲ್ಯಾಣಿಯಲ್ಲಿ ಈಜಲು ಹೋದ ಯುವಕ ಮರಳಿ ಸಿಕ್ಕಿದ್ದು ಶವವಾಗಿ

ಮಧುಗಿರಿ: ಮಧುಗಿರಿ ತಾಲೂಕಿನ ಮಲೆರಂಗನಾಥ ಸ್ವಾಮಿ ಬೆಟ್ಟಕ್ಕೆ ಅಕ್ಕನ ಮದುವೆ ಲಗ್ನ ಪತ್ರಿಕೆ ಪೂಜೆ ಸಲ್ಲಿಸಲು ಬಂದ ಯುವಕ ಬೆಟ್ಟದ ಮೇಲೆ ಇರುವ ನೀರಿನ ಕಲ್ಯಾಣಿಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಬೆಂಗಳೂರು ಮೂಲದ ಬಲರಾಮ್ (25) ಮೃತಪಟ್ಟ ದುರ್ದೈವಿಯಾಗಿದ್ದು, ಇಂದು ಮಲೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಕುಟುಂಬ ಸಮೇತ ಲಗ್ನ ಪತ್ರಿಕೆಯನ್ನು ದೇವರ ಸನ್ನಿಧಿಯಲ್ಲಿ ಪೂಜಿಸಲು ಬಂದಿದ್ದರು. ಬಲರಾಮ್ ನೀರಿನ ಕಲ್ಯಾಣಿಯಲ್ಲಿ ಈಜಲು ಹೋಗಿ ಮರಣ ಹೊಂದಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತ ದೇಹವನ್ನು ಮೇಲೆತ್ತಿದ್ದಾರೆ. ಮಧುಗಿರಿ ಪೋಲಿಸ್ ಠಾಣೆಯ ಸಿಪಿಐ ಸರ್ದಾರ್ ಮತ್ತು ಪೊಲೀಸ್ ರಂಗನಾಥ್, ನಟರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನ್ಯೂಸ್, ತುಮಕೂರು

Edited By : Vijay Kumar
PublicNext

PublicNext

08/10/2022 03:27 pm

Cinque Terre

10.97 K

Cinque Terre

0