ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ವಿದ್ಯುತ್ ಶಾಕ್‌ನಿಂದ ಬಿದ್ದ ಕೂಲಿ ಕಾರ್ಮಿಕ ಮೃತ್ಯು

ತುಮಕೂರು: ವಿದ್ಯುತ್ ಕಾಮಗಾರಿ ಕೆಲಸ ಸಮಯದಲ್ಲಿ ವಿದ್ಯುತ್ ಪ್ರಹರಿಸಿ ಕೂಲಿ ಕಾರ್ಮಿಕನೋರ್ವ ಕಾಲು ಜಾರಿ ಮೂರು ಅಂತಸ್ತಿನ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಪಾವಗಡದಲ್ಲಿ ನಡೆದಿದೆ.

ಮಂಜುನಾಥ (28) ಮೃತ ದುರ್ದೈವಿ. ತಲೆಗೆ ತೀವ್ರ ಪೆಟ್ಟು ಬಿದ್ದ ಮಂಜುನಾಥ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಮಾರ್ಗ ಮದ್ಯೆ ಮಂಜುನಾಥ ಮೃತಪಟ್ಟಿದ್ದಾರೆ. ಬಳಿಕ ಪಾವಗಡ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ.

ಮಂಜುನಾಥ ಅವರ ಪತ್ನಿ ತುಂಬು ಗರ್ಭಿಣಿ ಎಂಬ ಮಾಹಿತಿ ಲಭ್ಯವಾಗಿದ್ದು, ಮಂಜುನಾಥ್ ಅವರಿಗೆ ಗಂಡು ಮಗು ಇದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರದಿ: ಪಬ್ಲಿಕ್ ನೆಕ್ಸ್ಟ್ ರಾಘವೇಂದ್ರ ದಾಸರಹಳ್ಳಿ, ತುಮಕೂರು

Edited By : Vijay Kumar
PublicNext

PublicNext

07/10/2022 05:48 pm

Cinque Terre

13.55 K

Cinque Terre

0