ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ದಲಿತರು ಎಂದು ಕೀಳಾಗಿ ಕಾಣುತ್ತಿದ್ದಾರೆ : ಗ್ರಾಮ ಪಂಚಾಯಿತಿ ನೌಕರರ ಆರೋಪ

ಪಾವಗಡ: ಗ್ರಾ.ಪಂ ಸವರ್ಣೀಯ ಸದಸ್ಯರು ದಲಿತ ಡಿ ಗ್ರೂಪ್ ಸಿಬ್ಬಂದಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ತಡವಾಗಿ ಬೆಳಕಿಗೆ ಬಂದಿದೆ.

ಪಾವಗಡ ತಾಲೂಕಿನ ಸಿ.ಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಜಯಮ್ಮನ ಮಗಳು ಥಾಮಸ ಎಂಬುವರು ಜಾತಿನಿಂದನೆಗೆ ಒಳಗಾಗಿದ್ದು ಇದನ್ನು ಸ್ಥಳೀಯ ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ನೌಕರ ಪತಿ ನಿಧನದಿಂದ ಅನುಕಂಪದ ಆಧಾರದ ಮೇಲೆ ಪತಿಯ ಕೆಲಸವನ್ನು ಜಯಮ್ಮನವರಿಗೆ 15 ವರ್ಷಗಳ ಹಿಂದೆ ನೀಡಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಆಕೆ ಅನಾರೋಗ್ಯದಿಂದ ನರಳುತ್ತಿರುವ ಹಿನ್ನೆಲೆಯಲ್ಲಿ ಆಕೆಯ ಮಗಳು ಥಾಮಸ ತಾಯಿಯ ಕೆಲಸವನ್ನು ಗ್ರಾಮಪಂಚಾಯಿತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಗ್ರಾಮ ಪಂಚಾಯಿತಿ ಸಭೆ ನಡೆಯುತ್ತಿರುವ ವೇಳೆ ದಲಿತ ಮಹಿಳೆ ಸಭೆಗೆ ಪಾನೀಯ ಮತ್ತು ತಿಂಡಿ ವಿತರಿಸಲು ಹೊಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅರುಂಧತಿ ನಾಗಲಿಂಗಪ್ಪ ಎಂಬ ಸದಸ್ಯೆಯೊಬ್ಬರು ನೀನು ತಂದಿರುವ ಪಾನೀಯ ಮತ್ತು ತಿಂಡಿ ನಾನು ಸೇವಿಸುವುದಿಲ್ಲ ನೀನು ದಲಿತ ಜಾತಿಗೆ ಸೇರಿದವಳು ಎಂದು ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಇವರ ಸದಸ್ಯತ್ವವನ್ನು ರದ್ದು ಪಡಿಸಬೇಕು ಎಂದು ದಲಿತ ಪರ ಸಂಘಟನೆಗಳು ಮತ್ತು ಸ್ಥಳೀಯ ದಲಿತ ಮುಖಂಡರಾದ ನಾಗೇಶ್, ತಿಪ್ಪೇಸ್ವಾಮಿ, ಪೆದ್ದಣ್ಣ, ಮಂಗಳವಾಡ ಹನುಮಂತರಾಯಪ್ಪ ಸೇರಿದಂತೆ ಇತರರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರ ಮೇಲಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ವಿಚಾರ ಪಾವಗಡ ತಾಲೂಕಿನಾದ್ಯಂತ ಸಂಚಲನ ಮೂಡಿಸಿದೆ.

-ರಾಘವೆಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್ ತುಮಕೂರು

Edited By : Shivu K
PublicNext

PublicNext

23/09/2022 10:23 am

Cinque Terre

27.91 K

Cinque Terre

1