ಕೊರಟಗೆರೆ: ಕೊರಟಗೆರೆ ಪಟ್ಟಣದಲ್ಲಿ ಎತ್ತಿನ ಹೊಳೆಯ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜರ್ ಅವಿನಾಶ್ ಬಾಡಿಗೆ ಮನೆಯಲ್ಲಿ ಕಳೆದ ಶನಿವಾರ 35 ಲಕ್ಷ 20 ಸಾವಿರ ಹಣ ದರೋಡೆ ಪ್ರಕರಣ ಭೇದಿಸುವಲ್ಲಿ ಕೊರಟಗೆರೆ ಪೋಲೀಸರು ಯಶಸ್ವಿಯಾಗಿದ್ದು, ಮೂರು ಮಂದಿ ಆರೋಪಿ ಗಳನ್ನು ಬಂಧಿಸಲಾಗಿದೆ.
ಹಣ ಕಳವು ಮಾಡಿದ್ದ ಬಂಧಿತ ಆರೋಪಿಗಳಾದ ಕೊರಟಗೆರೆ ನಿವಾಸಿ ಮಂಜು ನಾಥ್(38), ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಸಿದ್ದರಾಜು(32) ಮತ್ತು ಮಧುಗಿರಿ ತಾಲೂಕಿನ ಪುರವರ ಹೋಬಳಿಯ ವಡ್ಡರ ಹಟ್ಟಿ ಲಕ್ಷ್ಮೀ ನಾರಾಯಣ್ ಅಲಿಯಾಸ್ ನಾರಾಯಣ್(34) ಬಂಧಿತ ಆರೋಪಿಗಳು. ಮೊದಲನೆ ಆರೋಪಿ ಮಂಜುನಾಥ್ ದೂರುದಾರ ಅವಿನಾಶ್ರವರ ಕಾರು ಚಾಲಕನಾಗಿ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಎರಡನೇ ಆರೋಪಿ ಸಿದ್ದ ರಾಜು ಸೇರಿಕೊಂಡು ಅವಿನಾಶ್ ಮನೆಯ ಕೀಲಿಗಳನ್ನು ಕಳುಹಿಸಿ ಅದೇ ತರಹದ ನಕಲಿ ಕೀಗಳನ್ನು ಸಿದ್ಧಪಡಿಸಿಕೊಂಡು ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಎರಡನೇ ಆರೋಪಿ ಸಿದ್ದ ರಾಜು ಕಡೆಯಿಂದ 35,20,000 ಹಣವನ್ನು ಕಳವು ಮಾಡಿ ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ 4ನೇ ಆರೋಪಿ ಕೃತ್ಯಕ್ಕೆ ತಂದಿದ್ದ ವಾಹನದಲ್ಲಿ ಕುಳಿತುಕೊಂಡು ಎಲ್ಲರೂ ಭಾಗ ಮಾಡಿ ಕೊಂಡಿದ್ದಾರೆ.
ಈ ಪ್ರಕರಣ ಜಿಲ್ಲೆಯಾದ್ಯಂತ ಸಂಚಲವನ್ನು ಮೂಡಿಸಿತ್ತು. ತುಮಕೂರು ಜಿಲ್ಲಾ ಪೋಲೀಸ್ ಅಧೀಕ್ಷಕರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ನಿರ್ದೇಶನದಂತೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಕೊರಟಗೆರೆ ಸಿಪಿಐ ಸುರೇಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ನಂತರ ತನಿಖೆಯನ್ನು ಆರಂಭಿಸಿದ ಪೊಲೀಸರ ತಂಡ ಪ್ರಕರಣ ನಡೆದು 5 ದಿನಗಳಲ್ಲಿ ಆರೋಪಿಗಳ ಹೆಡೆಮುಡಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ 30ಲಕ್ಷ 20 ಸಾವಿರ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತುಮಕೂರು ಅಡಿಶನಲ್ ಎಸ್ಪಿ ಉದೇಶ್ ಮಾರ್ಗದರ್ಶನದಂತೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಅವರ ತಂಡದ ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ತೆ ಕಾರ್ಯದಲ್ಲಿ ಸಿಬ್ಬಂದಿಗಳಾದ ಮೋಹನ್, ನರಸಿಂಹರಾಜು, ಸೈಯದ್ ರಿಪತ್ ಅಲಿ, ಟೆಕ್ನಿಕಲ್ ಸೆಲ್ ನಟರಾಜು, ಜಗನ್ನಾಥ್ ಗಂಗಾಧರ್, ರಂಗನಾಥ್, ಶಶಿಕುಮಾರ್ ರಾಜ್ ಕುಮಾರ್ ಪಾಲ್ಗೊಂಡಿದ್ದರು ತಂಡಕ್ಕೆ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂಧಿಸಿದ್ದಾರೆ.
PublicNext
10/09/2022 12:30 pm