ತುಮಕೂರು : ಸತತವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದ ಮದಲೂರು ಕೆರೆ ಕೋಡಿ ಬಿದ್ದಿದ್ದು ಕೋಡಿ ಬಿದ್ದ
ಕೆರೆಗೆ ಕೋಣ ಬಲಿ ಕೊಟ್ಟು ಗ್ರಾಮಸ್ಥರು ವಿಕೃತಿ ಮೆರೆದಿದ್ದಾರೆ.
ಶಿರಾ ಬಿಜೆಪಿ ಶಾಸಕ ಡಾ.ರಾಜೇಶ್'ಗೌಡ ಬೆಂಬಲಿಗರು ಶಾಸಕ ಕಣ್ಣೇದುರೇ ಕೋಣ ಬಲಿ ಕೊಟ್ಟು ತಲೆಯನ್ನು ನೀರಿನಲ್ಲಿ ಹರಿ ಬಿಟ್ಟು ಮೌಡ್ಯಾಚರಣೆ ಮೆರೆದಿದ್ದಾರೆ.
ಕಳೆದ ಸೆ.1 ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರಾಕಾರ ಮಳೆಯಿಂದ ತುಂಬಿ ಹರಿದ ಮದಲೂರು ಕೆರೆಗೆ ಶಾಸಕ ಡಾ. ರಾಜೇಶ್'ಗೌಡ ಬಾಗೀನ ಅರ್ಪಿಸಿದ ಬಳಿಕ
ಕೋಣ ಬಲಿ ಕೊಟ್ಟು ನಂತರ ಕೋಣದ ತಲೆಯನ್ನು ಹೊತ್ತು ಕೆರೆ ಪ್ರದಕ್ಷಿಣೆ ಹಾಕಲಾಗಿದೆ.
ಶಾಸಕ ರಾಜೇಶ್'ಗೌಡ ಕಣ್ಣೇದುರೇ ಬಲಿ ಕೊಟ್ಟ ಕೋಣದ ತಲೆಯನ್ನು ನೀರಿಗೆ ಹರಿ ಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೇಡೇ ಸಖತ್ ವೈರಲ್ ಆಗಿದ್ದು, ಶಾಸಕರ ಬೆಂಬಲಿಗರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
PublicNext
09/09/2022 01:59 pm