ಮಧುಗಿರಿ: ಅನಾರೋಗ್ಯದಿಂದ ಮೃತಪಟ್ಟ ದಲಿತ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ಗ್ರಾಮಸ್ಥರು ಪರದಾಡಿ ದ ಘಟನೆ ತಾಲ್ಲೂಕಿನ ಬಿಜ ವರ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಬೇಸತ್ತ ಗ್ರಾಮಸ್ಥರು ರಸ್ತೆಯಲ್ಲಿ ಶವ ಇಟ್ಟು ಇಂದು ಪ್ರತಿಭಟನೆ ಮಾಡಿದ್ದಾರೆ.
ಮಧುಗಿರಿ ತಾಲೂಕಿನ ಬಿಜವರ ಗ್ರಾಮದ ಹನುಮಕ್ಕ (75) ಶನಿವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಭಾನುವಾರ ಹನುಮಕ್ಕನ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ವಂತ ಸ್ಥಳವಾಗಲಿ, ಸರ್ಕಾರಿ ರುದ್ರಭೂಮಿ ಯಾಗಲಿ ಇಲ್ಲದೆ ಇರುವುದರಿಂದ ಗ್ರಾಮಸ್ಥರು ಹನುಮಕ್ಕ ಮೃತ ದೇಹಕ್ಕೆ ಅಂತ್ಯ ಸಂಸ್ಕಾರ ಮಾಡಲಾಗದೆ ಪರದಾಡಿದ್ದಾರೆ.
ಸುಮಾರು 350 ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಾಗಿದ್ದು, ಹೆಣ ಹೂಳಲು ಅಂಗೈ ಅಗಲ ಜಾಗವಿಲ್ಲದ ಪರಿಸ್ಥಿತಿಯಿದ್ದು, ಈ ಗ್ರಾಮದಲ್ಲಿ ಯಾರಾದರೂ ಮೃತ ಪಟ್ಟರೆ ಶವ ಸಂಸ್ಕಾರಕ್ಕೂ ಜಾಗ ಇಲ್ಲದೆ ಪರದಾಡು ವಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತದೆ.
ಸಭೆಗಳಲ್ಲಿ ರುದ್ರಭೂಮಿ ಮುಂಜೂರು ಮಾಡುವುದಾಗಿ ಹೇಳಿ ದಲಿತರ ಕಣ್ಣೋರೆಸುವ ತಂತ್ರ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಶವಸಂಸ್ಕಾರಕ್ಕೆ ಸ್ಥಳ ಗುರುತಿಸಿ ಸಮಸ್ಯೆಯನ್ನ ಶಾಶ್ವತ ವಾಗಿ ಬಗೆಹರಿಸಬೇಕು ಇಲ್ಲಾವಾದಲ್ಲಿ ತಹಶೀಲ್ದಾರ್ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಎದುರು ಶವವಿಟ್ಟು ಉಗ್ರ ವಾದ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆಯಿಂದ ಕೂಡಲೇ ಎಚ್ಚೆತ್ತುಕೊಂಡ ತಹಶೀಲ್ದಾರ್ ಸುರೇಶ್ ಆಚಾರ್ ಸ್ಥಳಕ್ಕೆ ತೆರಳಿ ಗ್ರಾಮದ ದಲಿತರ ರುದ್ರ ಭೂಮಿಗೆ ಸ್ಥಳ ಗುರುತಿಸಿ ಮೃತ ಹನುಮಕ್ಕರ ಅಂತ್ಯಕ್ರಿಯೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ .
Kshetra Samachara
19/09/2022 07:05 pm