ತುಮಕೂರು: ಎಸಿಬಿ ರದ್ದುಮಾಡಿ ಲೋಕಾಯುಕ್ತ ಪೊಲೀಸರಿಗೆ ಬಲ ನೀಡಿದ ಮೇಲೆ ತುಮಕೂರಿನಲ್ಲಿ ಮೊದಲ ದಾಳಿಯಾಗಿದೆ.
ಅಂಗಡಿ ಪರವಾನಿಗೆ ನವೀಕರಣಕ್ಕೆ 5 ಸಾವಿರ ಲಂಚ ಪಡೆಯುವಾಗ ಕಾರ್ಮಿಕ ನಿರೀಕ್ಷಕ ಕಿರಣ್ ಕುಮಾರ್ ಲೋಕಾಯುಕ್ತ ಪೊಲೀಸರ ದಾಳಿಗೆ ಸಿಕ್ಕಿಬಿದ್ದಿದ್ದಾರೆ.
ಅಂಗಡಿ ಪರವಾನಗಿ ನವೀಕರಣಕ್ಕೆ ವ್ಯಕ್ತಿಯೊಬ್ಬ ಅರ್ಜಿ ಸಲ್ಲಿಸಿದ್ದು, ಪರವಾನಗಿ ನವೀಕರಣಕ್ಕೆ ಕಾರ್ಮಿಕ ನಿರೀಕ್ಷಕ ಕಿರಣ್ ಕುಮಾರ್ 5000 ಲಂಚಕ್ಕೆ ಒತ್ತಾಯಿಸಿದ್ದಾರು ಸೋಮವಾರ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ರವೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
Kshetra Samachara
26/09/2022 07:40 pm