ತುಮಕೂರು: ಕುಖ್ಯಾತ ರೌಡಿಶೀಟರ್ ರೋಹಿತ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಪುಡಿರೌಡಿಗಳಿಬ್ಬರು ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಂಡಿರುವ ಘಟನೆ ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲ್ಲಾಪುರದ ಕುಶಾಲ್ ಬಾರ್‌ನಲ್ಲಿ ತಡರಾತ್ರಿವರೆಗೆ ಒಟ್ಟಿಗೆ ಕುಡಿದ ಅಂತರಸನಹಳ್ಳಿಯ ಭರತ್ ಹಾಗೂ ಯಲ್ಲಾಪುರದ ಧನುಶ್ ನಡುವೆ ಜಗಳ ಶುರುವಾಗಿದ್ದು, ಭರತ್ ಬಾಟಲಿನಿಂದ ಧನುಶ್‌ಗೆ ಹೊಡೆದಿದ್ದಾನೆ ಎನ್ನಲಾಗಿದ್ದು, ಧನುಶ್ ಕುತ್ತಿಗೆ ಬಳಿ ಗಾಯವಾಗಿದೆ.
ನಂತರ ಧನುಶ್ ಭರತ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ತಲೆ ಮೇಲೆ ಹಾಲೋಬ್ರಿಕ್ಸ್ ಎತ್ತಿಹಾಕಿದ್ದು, ಭರತ್ ಮುಖಕ್ಕೆ ತೀವ್ರವಾಗಿ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದ್ದು, ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಧನುಶ್ ನನ್ನು ಬಂಧಿಸಿದ್ದಾರೆ.
ಗಾಯಗೊಂಡಿರುವ ಭರತ್, ರೋಹಿತ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದು, ಧನುಶ್ ಸಹ ರೋಹಿತ್‌ನ ಸಹಚರರಲ್ಲಿ ಒಬ್ಬನಾಗಿದ್ದಾನೆ.
PublicNext
02/02/2025 12:37 pm