ಕೊರಟಗೆರೆ: ಕಳೆದ ಮೂರು ದಿನದಿಂದ ಸುರಿದ ಭಾರಿ ಮಳೆಯಿಂದಾಗಿ ಕೊರಟಗೆರೆ ತಾಲೂಕಿನ ದಾಸಲುಕುಂಟೆ ಗ್ರಾಮದ ಕೆರೆಯು ಸುಮಾರು 18 ವರ್ಷಗಳ ನಂತರ ಕೋಡಿ ಬಿದ್ದು ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ದೊಡ್ಡ ಮಟ್ಟದಲ್ಲಿ ಕೆರೆ ಕೋಡಿ ಬಿದ್ದಿದೆ. ಈ ಸಂದರ್ಭದಲ್ಲಿ ತುಮಕೂರು ಮಾರ್ಗವಾಗಿ ತೋವಿನಕೆರೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚಾಲಕನ ಸಮೇತ ಕೆರೆ ಕೋಡಿ ನೀರಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಕಾರು ನೀರಿಗೆ ಬಿಳುತ್ತಿದ್ದಂತೆ ಸ್ಥಳೀಯರು, ಕುಂಟೆ ಗ್ರಾಮದ ಸಿದ್ದರಾಜು ಮತ್ತು ಸ್ನೇಹಿತರ ತಂಡ ಕಾರು ಚಾಲಕರನ್ನು ತಡರಾತ್ರಿಯ ಲ್ಲಿಯೇ ರಕ್ಷಣೆ ಮಾಡಿದ್ದಾರೆ. ಬೆಳಗ್ಗೆ ಕಾರನ್ನು ಜೆಸಿಬಿ ಯಂತ್ರದ ಮೂಲಕ ಹೊರಗೆ ತೆಗೆದಿದ್ದಾರೆ ಎನ್ನಲಾಗಿದೆ.
ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ : ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು
PublicNext
14/10/2022 05:25 am