ಕೊರಟಗೆರೆ: ಪಟ್ಟಣದ ಹೊರವಲಯದ ದೊಡ್ಡೆಗೌಡ ಪೆಟ್ರೋಲ್ ಬಂಕ್ ಮುಂಬಾಗದಲ್ಲಿ ಎರಡು ಬೈಕ್ ಪರಸ್ಪರ ಡಿಕ್ಕಿ ಹೊಡೆದ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಬೈಕ್ ಸವಾರ ನರಸಿಂಹ ಮೂರ್ತಿ (58) ಪೆಟ್ರೋಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್ ಕಡೆ ಬೈಕ್ ತಿರುಗಿಸುವ ಸಂರ್ಭದಲ್ಲಿ ಹಿಂಬದಿಯಿಂದ ಮತ್ತೊಂದು ಬೈಕ್ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾ ಲನೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ.
ಬೈಕ್ ಸವಾರ ನರಸಿಂಹ ಮೂರ್ತಿ ಗೆ ಬಲಭುಜದ ಮೂಳೆ ಮುರಿದಿದ್ದು, ಗಾಯಾಳನ್ನು ಕೊರಟಗೆರೆ ಸಾರ್ವ ಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನಾಗರಾಜು ಬಿ,ಸಿಬ್ಬಂದಿಗಳಾದ ಎಸ್.ಐ. ಧರ್ಮೇಗೌಡ, ಮುಖ್ಯ ಪೇದೆ ಜಯಪ್ರಕಾಶ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
28/09/2022 07:27 pm