ತುಮಕೂರು: ಕಾರು ಹಾಗೂ ಮೊಪೆಡ್ ನಡುವೆ ಡಿಕ್ಕಿ ಸಂಭವಿಸಿ ಮೊಪೆಡ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ತುಮಕೂರು ನಗರದ ಹೊರವಲಯದ ಕ್ಯಾತ್ಸಂದ್ರ ಹೆಚ್.ಪಿ ಪೆಟ್ರೋಲ್ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ.
ವೀರ ನಾಗಪ್ಪ (72) ಮೃತ ಸವಾರ. ವೀರ ನಾಗಪ್ಪ ನಿವೃತ್ತ ಸರ್ಕಾರಿ ನೌಕರರಾಗಿದ್ದು, ಮೊಪೆಡ್‌ನಲ್ಲಿ ಕ್ಯಾತ್ಸಂದ್ರದಲ್ಲಿ ಹೋಗುವಾಗ ದುರ್ಘಟನೆ ಸಂಭವಿಸಿದೆ. ಈ ಸಂಬಂದ ಕ್ಯಾಸ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
12/09/2022 12:01 pm