ನ್ಯೂಜಿಲೆಂಡ್ ಪ್ರಸ್ತುತ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಟಿ20 ತ್ರಿಕೋನ ಸರಣಿಗೆ ಆತಿಥ್ಯ ವಹಿಸುತ್ತಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳ ನಡುವೆ ಫೈನಲ್ ನಡೆಯುವ ಮೊದಲು ಮೂರು ತಂಡಗಳು ಪರಸ್ಪರ ನಾಲ್ಕು ಬಾರಿ ಆಡಲಿವೆ. ಮೂರು ತಂಡಗಳು ಇಲ್ಲಿಯವರೆಗೆ ತಲಾ ಎರಡು ಪಂದ್ಯಗಳನ್ನು ಆಡಿದ್ದು, ಪಾಕಿಸ್ತಾನ ಪ್ರಸ್ತುತ ಎರಡು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಏತನ್ಮಧ್ಯೆ, ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ ಮತ್ತು ಬಾಂಗ್ಲಾದೇಶ ನಂತರದ ಸ್ಥಾನದಲ್ಲಿದೆ.ಕ್ರೈಸ್ಟ್ ಚರ್ಚ್ ನ ಹ್ಯಾಗ್ಲಿ ಓವಲ್ ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾದವು. ಈ ವೇಳೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಕ್ರೀಡಾಂಗಣ ಪ್ರವೇಶಿಸಿದ್ದಾನೆ. ಈ ವೇಳೆ ಸೆಕ್ಯುರಿಟಿ ಗಾರ್ಡ್ ಗಳು ಈ ವ್ಯಕ್ತಿಯನ್ನು ಹಿಡಿದು ಹೊರಹಾಕಿದ್ದಾರೆ. ಸದ್ಯ ಆ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
PublicNext
11/10/2022 11:40 am