ಸಿಡ್ನಿ: ಈ ಬಾರಿ ಟಿ20 ವರ್ಲ್ಡ್ ಕಪ್‌ಗೆ ಎಲ್ಲಾ ತಂಡಗಳು ಸದ್ದಿಲ್ಲದೆ ಸಿದ್ಧತೆ ನಡೆಸಿವೆ. ಟೀಮ್ ಇಂಡಿಯಾ ಸಹ ಈ ಸಲ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಅದರಲ್ಲೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ವಿಶ್ವಕಪ್ ಗೆ ತಂಡ ಸಜ್ಜಾಗಿದೆ. ಇದೆಲ್ಲದರ ನಡುವೆ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡುತ್ತಿದೆ.
ಇಂಜುರಿ ಸಮಸ್ಯೆಯಿಂದ ಆಲ್‌ರೌಂಡರ್ ರವಿಂದ್ರ ಜಡೇಜಾ, ಯಾರ್ಕರ್ ಸ್ಪೆಷಿಲಿಸ್ಟ್ ಬುಮ್ರಾ ವಿಶ್ವಕಪ್ ನಿಂದ ಹೊರಗಳುದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಇಬ್ಬರ ಅನುಪಸ್ಥಿತಿಯ ನಡುವೆ ಬಲಾಢ್ಯ ತಂಡವನ್ನು ಆಯ್ಕೆ ಮಾಡಿ ಆಸಿಸ್‌ಗೆ ಕಳುಹಿಸಿದೆ.
ಭಾರತ ತಂಡದ ವೇಳಾಪಟ್ಟಿ ಈ ಕೆಳಗಿನಂತಿದೆ:
ಭಾರತ-ಪಾಕಿಸ್ತಾನ: ಅಕ್ಟೋಬರ್ 23, ಭಾನುವಾರ ಮಧ್ಯಾಹ್ನ 1.30ಕ್ಕೆ
ಭಾರತ ವಿರುದ್ಧ ಎ2: ಅಕ್ಟೋಬರ್ 27, ಗುರುವಾರ ಮಧ್ಯಾಹ್ನ 12:30ಕ್ಕೆ
ಭಾರತ-ದಕ್ಷಿಣ ಆಫ್ರಿಕಾ: ಅಕ್ಟೋಬರ್ 30, ಭಾನುವಾರ ಸಂಜೆ 4.30ಕ್ಕೆ
ಭಾರತ-ಬಾಂಗ್ಲಾದೇಶ: ನವೆಂಬರ್ 2, ಬುಧವಾರ ಮಧ್ಯಾಹ್ನ 1.30ಕ್ಕೆ
ಭಾರತ ವಿರುದ್ಧ ಬಿ1: ನವೆಂಬರ್ 6, ಭಾನುವಾರ ಮಧ್ಯಾಹ್ನ 1:30ಕ್ಕೆ
ಭಾರತ ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್ದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್
PublicNext
10/10/2022 06:07 pm